ಉಡುಪಿ: ಕಾರ್ಪೋರೇಷನ್ ಬ್ಯಾಂಕಿಗೆ ಎಂಡಿ ಭೇಟಿ

ಉಡುಪಿ, ಮಾ.13: ಕಾರ್ಪೋರೇಷನ್ ಬ್ಯಾಂಕ್‌ನ 114ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಮುಖ್ಯ ಕಾರ್ಯಕ್ರಮ ನಿರ್ವಾಹಕ ಅಧಿಕಾರಿಯಾಗಿರುವ ಪಿ.ಎ.ಭಾರತಿ ಅವರು ಮಂಗಳವಾರ ಉಡುಪಿಗೆ ಭೇಟಿ ನೀಡಿ ವಿವಿಧ ಸೌಲಭ್ಯಗಳನ್ನು ವಿತರಿಸಿದರು.
ಬ್ಯಾಂಕಿನ ಸಿಎಸ್‌ಆರ್ ನಿಧಿಯಿಂದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ನೀಡಲಾದ 50 ಬ್ಯಾರಿಕೇಡ್‌ಗಳನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಾದ ನಿಶಾ ಜೇಮ್ಸ್ ಅವರಿಗೆ ಪಿ.ವಿ.ಭಾರತಿ ಹಸ್ತಾಂತರಿಸಿದರು.
ಅದೇ ರೀತಿ ಅಲೆವೂರು ಕುಕ್ಕಿಕಟ್ಟೆಯಲ್ಲಿರುವ ಶ್ರೀಕೃಷ್ಣ ಬಾಲನಿಕೇತನ ಅನಾಥಾಶ್ರಮಕ್ಕೆ ಒದಗಿಸಲಾದ ಜೈವಿಕ ಅನಿಲ ಸಲಕರಣೆಗಳನ್ನು ಭಾರತಿ ಅವರು ಆಶ್ರಮದ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

Next Story





