ದೇವಾಡಿಗರ ಸೇವಾ ಸಂಘಕ್ಕೆ ಆಡಳಿತಾಧಿಕಾರಿಯ ನೇಮಕ
ಉಡುಪಿ, ಮಾ.13: ಉಡುಪಿ ದೇವಾಡಿಗರ ಸೇವಾ ಸಂಘ (ರಿ) ಇದರ ದುರಾಡಳಿತವನ್ನು ಗಮನಿಸಿದ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯ ಇದೇ ಫೆ.11ರಂದು ಈ ಸಂಘದ ದೈನಂದಿನ ವ್ಯವಹಾರವನ್ನು ನೋಡಿಕೊಳ್ಳಲು ಸರಕಾರದಿಂದ ಆಡಳಿತಾಧಿಕಾರಿಯೊಬ್ಬರನ್ನು ನೇಮಿಸುವಂತೆ ಆದೇಶ ನೀಡಿದೆ.
ಅಲ್ಲದೇ ಮುಂದಿನ ನಾಲ್ಕು ತಿಂಗಳೊಳಗೆ ಹೊಸದಾಗಿ ಆಡಳಿತ ಮಂಡಳಿಗೆ ಚುನಾವಣೆಯನ್ನು ನಡೆಸುವಂತೆ ರಾಜ್ಯ ಹೈಕೋರ್ಟ್‌ನ ನ್ಯಾಯಧೀಶರಾದ ಅಲೋಕ್ ಆರಾಧೆ ಅವರು ತೀರ್ಪು ನೀಡಿದ್ದಾರೆ. ವಾದಿಗಳ ಪರವಾಗಿ ಉಚ್ಛ ನ್ಯಾಯಾಲಯದ ನ್ಯಾಯವಾದಿ ಕೆ.ಚಂದ್ರಶೇಖರ್ ಆಚಾರ್ ವಾದಿಸಿದ್ದರು ಎಂದು ಪತ್ರಿಕೆಗಳಿಗೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
Next Story





