ಜೂಜಾಟ ಕ್ಲಬ್ ಮೇಲೆ ಸಿಸಿಬಿ ದಾಳಿ: 45 ಮಂದಿಯ ಬಂಧನ- 2.42 ಲಕ್ಷ ನಗದು ಜಪ್ತಿ
ಬೆಂಗಳೂರು, ಮಾ.15: ಕಾನೂನು ಉಲ್ಲಂಘಿಸಿ ಹಣ ಪಣವಾಗಿ ಕಟ್ಟಿಕೊಂಡು ಕ್ಲಬ್ವೊಂದರಲ್ಲಿ ಜೂಜಾಟ ಆಡುತ್ತಿದ್ದ ಆರೋಪದಡಿ ಸಿಸಿಬಿ ದಾಳಿ ನಡೆಸಿ 45 ಜನರನ್ನು ಬಂಧಿಸಿ, 2.42 ಲಕ್ಷ ರೂ. ನಗದು ಜಪ್ತಿ ಮಾಡಿದ್ದಾರೆ.
ನಗರದ ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಬ್ರಿಡ್ಜ್ ಲೇಔಟ್, ಸಾಯಿಬಾಬ ಟೆಂಪಲ್ ರಸ್ತೆಯಲ್ಲಿರುವ ಕೇಂಬ್ರಿಡ್ಜ್ ಮೆಂಬರ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್ನಲ್ಲಿ ನ್ಯಾಯಾಲಯದ ನಿಭಂದನೆಗಳನ್ನು ಉಲ್ಲಂಘಿಸಿ ಸದಸ್ಯರಲ್ಲದ ಕೆಲವು ಜನರು ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story