ಎಪ್ರಿಲ್ನಿಂದ ಮಂಗಳೂರು-ಬೆಂಗಳೂರು ನಡುವೆ ಮತ್ತೊಂದು ವಿಮಾನ ಸೇವೆ
ಬೆಂಗಳೂರು, ಮಾ.19: ಮಂಗಳೂರು ಮತ್ತು ಬೆಂಗಳೂರು ನಡುವೆ ಇನ್ನೊಂದು ವಿಮಾನಯಾನ ಸೇವೆ ಸದ್ಯದಲ್ಲೇ ಆರಂಭಗೊಳ್ಳಲಿದ್ದು, ವಿಮಾನ ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದು ಬಂದಿದೆ.
ಇಂಡಿಗೋ ಸಂಸ್ಥೆ ಇದೇ ಏಪ್ರಿಲ್ನಿಂದ ಮಂಗಳೂರು-ಬೆಂಗಳೂರು ನಡುವೆ ವಿಮಾನ ಸೇವೆ ಆರಂಭಿಸಲಿದೆ. ದೇಶದ ಆನ್-ಟೈಮ್ ಪರ್ಫಾರ್ಮರ್ ಇಂಡಿಗೊ, ತನ್ನ ಜಾಲಕ್ಕೆ 14 ಹೊಸ ವಿಮಾನಗಳನ್ನು ಸೇರ್ಪಡೆ ಮಾಡುತ್ತಿದ್ದು, ಅದರಲ್ಲಿ ಮಂಗಳೂರು-ಬೆಂಗಳೂರು ಮಾರ್ಗವೂ ಸೇರಿದೆ. ಇಂಡಿಗೋ ಚೆನ್ನೈ-ರಾಯಪುರ, ಹೈದರಾಬಾದ್-ಗೋರಖ್ಪುರ ಮತ್ತು ಕೋಲ್ಕತಾ-ಗೋರಖ್ಪುರಗಳ ನಡುವೆ ತನ್ನ ಮೊದಲ ವಿಮಾನವನ್ನು ಆರಂಭಿಸಲಿದೆ.
ಬೆಂಗಳೂರು ಮಂಗಳೂರು ವಿಮಾನ ಸೇವೆ ಮಾತ್ರವಲ್ಲದೇ, ಪ್ರಸ್ತುತ ಚೆನ್ನೆ-ತಿರುವನಂತಪುರ, ಬೆಂಗಳೂರು-ಉದಯಪುರ ಮತ್ತು ಬೆಂಗಳೂರು-ಚೆನ್ನೆ ಮಾರ್ಗಗಳಿಗೆ ಹೆಚ್ಚು ವಿಮಾನಗಳ ಸೇರ್ಪಡೆ ಮಾಡಲಿದೆ. ಎಲ್ಲ ಹೊಸ ಸೇವೆಗಳು ಏಪ್ರಿಲ್ನಿಂದ ಪ್ರಾರಂಭಗೊಳ್ಳಲಿವೆ.
ಸಮಯ: ಹೊಸ ವಿಮಾನ ಮುಂಜಾನೆ 7.30ಕ್ಕೆ ಬೆಂಗಳೂರಿನಿಂದ ಹೊರಟು 8.40ಕ್ಕೆ ಮಂಗಳೂರು ತಲುಪಲಿದೆ. ಬಳಿಕ 9.30ಕ್ಕೆ ಮಂಗಳೂರಿನಿಂದ ಹೊರಟು 10.30ಕ್ಕೆ ಬೆಂಗಳೂರು ತಲುಪಲಿದೆ.