ಫೆಲೆಸ್ತೀನ್ ನಿರಾಶ್ರಿತರ ನಿಧಿಗೆ ಉದಾರ ದೇಣಿಗೆಗೆ ಮನವಿ
ವಿಶ್ವಸಂಸ್ಥೆ, ಮಾ. 19: ಫೆಲೆಸ್ತೀನ್ ನಿರಾಶ್ರಿತರ ನಿಧಿಗೆ ಕಳೆದ ವರ್ಷದಂತೆ ಈ ಬಾರಿಯೂ ಉದಾರವಾಗಿ ದೇಣಿಗೆ ನೀಡುವಂತೆ ವಿಶ್ವಸಂಸ್ಥೆಯ ಫೆಲೆಸ್ತೀನ್ ನಿರಾಶ್ರಿತರ ಸಂಸ್ಥೆ ದಾನಿಗಳಿಗೆ ಸೋಮವಾರ ಮನವಿ ಮಾಡಿದೆ.
ಕಳೆದ ವರ್ಷ ತನ್ನ ದೇಣಿಗೆಯನ್ನು ಅಮೆರಿಕ ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸಿದ ಬಳಿಕ, ಕೊರತೆ ಬಿದ್ದ 446 ಮಿಲಿಯ ಡಾಲರ್ (ಸುಮಾರು 3078 ಕೋಟಿ ರೂಪಾಯಿ) ಮೊತ್ತವನ್ನು ದಾನಿಗಳು ತುಂಬಿದ್ದರು.
ಸಂಸ್ಥೆಯು 53 ಲಕ್ಷ ಫೆಲೆಸ್ತೀನ್ ನಿರಾಶ್ರಿತರಿಗೆ ನೆರವು ನೀಡುತ್ತಿದೆ.
Next Story