Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ನೇತ್ರಾವತಿ ತಟದಲ್ಲಿ ತೆಪ್ಪದ ಮೇಲಿನ...

ನೇತ್ರಾವತಿ ತಟದಲ್ಲಿ ತೆಪ್ಪದ ಮೇಲಿನ ಅತಂತ್ರ ಬದುಕು

ಮೀನುಗಾರಿಕೆಯೇ ಈ ಕುಟುಂಬಗಳಿಗೆ ಜೀವನಾಧಾರ

ವಾರ್ತಾಭಾರತಿವಾರ್ತಾಭಾರತಿ20 March 2019 7:03 PM IST
share
ನೇತ್ರಾವತಿ ತಟದಲ್ಲಿ ತೆಪ್ಪದ ಮೇಲಿನ ಅತಂತ್ರ ಬದುಕು

ಜೀವನ ಜೋಪಡಿಯಲ್ಲಾದರೂ ಉತ್ತಮ ಶೌಚಾಲಯ!

ಈ ಕುಟುಂಬಗಳು ನೆಲದ ಮೇಲೆ ಟೆಂಟ್ ರೀತಿಯ ಜೋಪಡಿಗಳಲ್ಲಿ ಬದುಕುತ್ತಿದ್ದರೂ ಉತ್ತಮವಾದ ಶೌಚಾಲಯಗಳನ್ನು ನಿರ್ಮಿಸಿಕೊಂಡು ನದಿ ತೀರದಲ್ಲಿ ಸ್ವಚ್ಛತೆಗೆ ಒತ್ತು ನೀಡಿವೆ. ಉಳಿದಂತೆ ಇವರಿಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳಿಲ್ಲ.

ಮಂಗಳೂರು, ಮಾ.19: ನೇತ್ರಾವತಿ ಕರಾವಳಿಯ ಜೀವನದಿ. ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯ ಜನರ ಜೀವನಮಾಮೃತದ ಜೊತೆಗೆ ಒಡಲಲ್ಲಿ ತುಂಬಿಕೊಂಡ ಅಪಾರವಾದ ಪ್ರಾಕೃತಿಕ ಸಂಪತ್ತಿನ (ಮರಳು, ಮತ್ಸ) ಮೂಲಕವೂ ನೇತ್ರಾವತಿ ತನ್ನ ತೀರದಲ್ಲಿ ನೆಲೆ ಕಂಡುಕೊಂಡವರಿಗೆ ಬದುಕಿಗೊಂದು ಅರ್ಥ ಕಲ್ಪಿಸಿರುವ ಮಹಾಮಾತೆ. ಜತೆಗೆ ನದಿ ನೀರಲ್ಲಿಯೇ ಬದುಕು ಕಂಡುಕೊಂಡಿರುವ ವಲಸೆ ಕುಟುಂಬಗಳಿಗೂ ಈಕೆ ಆಶ್ರಯ ನೀಡಿದಾಕೆ.

ನೇತ್ರಾವತಿ ನದಿ ತೀರದುದ್ದಕ್ಕೂ ವಿವಿಧ ಕಡೆಗಳಲ್ಲಿ ರಾಜ್ಯದ ವಿವಿಧ ಕಡೆಗಳಿಂದ ವಲಸೆ ಬಂದಿರುವ ದಲಿತ, ಸಾಂಪ್ರದಾಯಿಕ ಮೀನುಗಾರಿಕೆಯನ್ನೇ ಬದುಕಾಗಿಸಿಕೊಂಡಿರುವ ಕುಟುಂಬಗಳು ನೆಲೆಸಿವೆ. ಮಂಗಳೂರು ನಗರಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜಪ್ಪಿನಮೊಗರು ಸಮೀಪ ನೇತ್ರಾವತಿ ಸೇತುವೆಯ ಎಡ ಪಾರ್ಶ್ವದಲ್ಲಿಯೂ 8 ಕುಟುಂಬಗಳು ತೆಪ್ಪವನ್ನೇ ಜೀವನಾಧಾರವಾಗಿಸಿ ಅತಂತ್ರ ಬದುಕನ್ನು ಸಾಗಿಸುತ್ತಿವೆ. ಮೂಲತ: ಚಿಕ್ಕ ಮಗಳೂರಿನ ಕಡೂರಿನ ಕ್ಯಾತೆಶಿಳ್ಳೆ ಜನಾಂಗಕ್ಕೆ ಸೇರಿದ ಈ ಕುಟುಂಬಗಳು ಕಳೆದ ಸುಮಾರು 35 ವರ್ಷಗಳಿಂದಲೂ ಇಲ್ಲಿ ನೆಲೆಸಿವೆ. ಕಳೆದ ಸುಮಾರು ಐದು ವರ್ಷಗಳಿಂದೀಚೆಗೆ ನದಿ ಸಮೀಪದ ಜಮೀನುದಾರರಿಂದ ಜಮೀನು ಖರೀದಿಸಿ ಟೆಂಟ್ ಹಾಕಿ ಜೀವನ ಸಾಗಿಸುತ್ತಿರುವ ಅವರು, ಬದುಕಿಗಾಗಿ ಅವಲಂಬಿಸಿಕೊಂಡಿರುವುದು ಮಾತ್ರ ನೇತ್ರಾವತಿಯ ಕಡಲ ಒಡಲಿನಲ್ಲಿ ಸಿಗುವ ಮತ್ಸ ಬೇಟೆ. ಅದಕ್ಕಾಗಿ ಇವರು ಬಳಸುವುದು ಸಾಂಪ್ರದಾಯಿಕ ರೀತಿಯ ಬಲೆ ಹಾಗೂ ತೆಪ್ಪ. ಹಿಂದೆಲ್ಲಾ ಬಿದಿರಿನ ತೆಪ್ಪವನ್ನು ಬಳಸುತ್ತಿದ್ದ ಈ ಕುಟುಂಬಗಳು ಸದ್ಯ ಲೋಹದ ತೆಪ್ಪದ ಮೇಲೆ ನದಿಯಲ್ಲಿ ತೇಲುತ್ತಾ ಬಲೆ ಹರಡಿ ಮೀನು ಹಿಡಿದು ಜೀವನ ಸಾಗಿಸುತ್ತಿವೆ.

ನದಿಯಲ್ಲಿ ಸುಮಾರು ಮೂರರಿಂದ ನಾಲ್ಕು ತಾಸುಗಳಷ್ಟೇ ಬಲೆ ಹರಡಿ ಮೀನು ಹಿಡಿಯುವ ಈ ಕುಟುಂಬಗಳು, ದೊರೆತ ಮೀನನ್ನು ಒಟ್ಟಾಗಿ ಮಂಗಳೂರು ಧಕ್ಕೆ ಪ್ರದೇಶ ಅಥವಾ ಮೀನು ಮಾರುಕಟ್ಟೆಗೆ ತೆರಳಿ ಮಾರಾಟ ಮಾಡುತ್ತವೆ. ಅಬ್ಬಬ್ಬಾ ಅಂದರೂ ಈ ಕುಟುಂಬವೊಂದಕ್ಕೆ ದಿನದ ಸರಾಸರಿ ಸಿಗುವ ಆದಾಯ 250 ರೂ.ಗಳಿಂದ 300 ರೂಪಾಯಿ. ಮಳೆಗಾಲದಲ್ಲಿ ಅದೂ ಇಲ್ಲ. ಆದರೆ ಸಿಕ್ಕಿದ್ದರಲ್ಲೇ ತೃಪ್ತಿಯಿಂದ ಜೀವನ ಸಾಗಿಸುವ ಇವರು ಮಂಗಳೂರನ್ನೇ ತಮ್ಮ ನೆಲೆಯಾಗಿಸಿಕೊಂಡು ಬದುಕುತ್ತಿದ್ದಾರೆ. ಸಾಲ ಮಾಡಿ ನದಿ ತೀರದಲ್ಲಿ ಜಮೀನು ಖರೀದಿಸಿರುವ ಇವರು ಬದುಕುತ್ತಿರುವುದು ಮಾತ್ರ ಜೋಪಡಿಯಲ್ಲಿ!

ಎಂಟು ಕುಟುಂಬದಲ್ಲಿ ಸುಮಾರು 40ರಷ್ಟು ಜನರು ಜೀವಿಸುತ್ತಿದ್ದು, 10ರಷ್ಟು ಮಕ್ಕಳು ಸಮೀಪದ ಸರಕಾರಿ ಶಾಲೆಯಲ್ಲಿ ಶಿಕ್ಷಣವನ್ನೂ ಪಡೆಯುತ್ತಿದ್ದಾರೆ. ಈ ಕುಟು ಂಬಗಳಲ್ಲಿ ಪಿಯುಸಿ, ಪದವಿ ಕಲಿತ ಯುವಕರೂ ತಮ್ಮ ಜೀವನಾಧಾರಕ್ಕಾಗಿ ಈ ಸಾಂಪ್ರದಾಯಿಕ ಕುಲಕಸುಬು ಮೀನುಗಾರಿ ಕೆಯನ್ನೇ ಅವಲಂಬಿಸಿದ್ದಾರೆ. ಜೀವನೋಪಾ ಯಕ್ಕಾಗಿ ಈ ಕುಟುಂಬಗಳು ಇಲ್ಲಿ ಬಂದು ನೆಲೆಸಿದ್ದರೂ ಮಂಗಳೂರಿನಲ್ಲೇ ತಮ್ಮ ಮುಂದಿನ ಜೀವನ ಎಂದು ನಿರ್ಧರಿಸಿ ಬದುಕುತ್ತಿದ್ದಾರೆ. ಆದರೆ, ಮೀನುಗಾರಿಕೆಯನ್ನೇ ಆಶ್ರಯಿಸಿಕೊಂಡಿರುವ ಇವರು ನದಿಯಲ್ಲಿ ಮೀನು ಹಿಡಿಯುವ ಸಂದರ್ಭ ಕೆಲವೊಂದು ರೀತಿಯ ತಕರಾರನ್ನು ಎದುರಿಸಬೇಕಾಗಿದೆ. ಹಲ್ಲೆ, ಬೆದರಿಕೆಯಂತಹ ಸಮಸ್ಯೆಯನ್ನೂ ಎದುರಿಸಬೇಕಾದ ಈ ಕುಟುಂಬಗಳು ಒಂದು ರೀತಿಯಲ್ಲಿ ಅತಂತ್ರ ಜೀವನವನ್ನು ಎದುರಿಸುತ್ತಿವೆ.

‘ಸುಮಾರು 35 ವರ್ಷಗಳಿಂದ ನಾನು ಇಲ್ಲಿ ನನ್ನ ಕುಟುಂಬದೊಂದಿಗೆ ಬದುಕುತ್ತಿದ್ದೇನೆ. ಬಲೆ ಹಾಕಿ ಮೀನು ಹಿಡಿಯುವುದಷ್ಟೆ ನಮಗೆ ಗೊತ್ತಿರುವ ಕಸುಬು. ಪ್ರಕೃತಿಗಾಗಲಿ, ಸ್ಥಳೀಯರಿಗಾಗಲಿ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನಾವು ಇಲ್ಲಿ ಬದುಕು ಕಟ್ಟಿಕೊಂಡಿದ್ದೇವೆ. ಹಾಗಿದ್ದರೂ ನಾವು ಪರವೂರಿನಿಂದ ಬಂದವರು. ಇಲ್ಲಿಂದ ಹೋಗಬೇಕು. ಮೀನುಗಾರಿಕೆ ಮಾಡಬಾರದೆಂಬ ಒತ್ತಡಗಳು ಇತ್ತೀಚಿನ ಕೆಲ ಸಮಯದಿಂದ ನಮ್ಮ ಮೇಲೆ ಬರುತ್ತಿದೆ. ನಮ್ಮ ಬದುಕೇ ಇದು. ಇದನ್ನು ಬಿಟ್ಟು ನಾವು ಎಲ್ಲಿಗೆ ಹೋಗುವುದು’ ಎನ್ನುತ್ತಾರೆ 56ರ ಹರೆಯದ ಧರ್ಮ.

‘ನಾವು ಯಾರಿಗೂ ತೊಂದರೆ ನೀಡಲು ಬಯಸುವವರಲ್ಲ. ಸಾಂಪ್ರದಾಯಿಕವಾಗಿ ಯಾವುದೇ ಯಂತ್ರಗಳಿಲ್ಲದೆ, ತೆಪ್ಪದಲ್ಲಿ ಮೀನು ಹಿಡಿದು ಜೀವನ ಸಾಗಿಸುತ್ತಿದ್ದೇವೆ. ಬಿಡು ಬಲೆಯನ್ನು ನದಿಯಲ್ಲಿ ಬೀಸುತ್ತಾ ನಾವು ಮೀನು ಹಿಡಿಯುತ್ತೇವೆ. ಯಾವುದೇ ರೀತಿಯ ರಾಸಾಯನಿಕವನ್ನೂ ನಾವು ಬಳಸುವುದಿಲ್ಲ. ಯಾವುದೇ ಅಧಿಕಾರಿಗಳು ಬಂದು ಕೂಡಾ ತಪಾಸಣೆ ಮಾಡಬಹುದು. ಆದರೆ ನಮಗೆ ಇಲ್ಲಿ ನೆಮ್ಮದಿಯ ಬದುಕಿನ ಜತೆಗೆ ಬದುಕಿಗೊಂದಿಷ್ಟು ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ನಮ್ಮ ಆಗ್ರಹ. ಈಗಾಗಲೇ ಸಂಬಂಧಪಟ್ಟವರಿಗೆ ನಾವು ಈ ಬಗ್ಗೆ ಮನವಿ ಮಾಡಿದ್ದೇವೆ’ ಎಂದು 43ರ ಹರೆಯದ ರವಿ ಹೇಳುತ್ತಾರೆ.

‘ನಾವು ಇಲ್ಲಿ ಬದುಕು ಕಟ್ಟಿಕೊಳ್ಳಲು ಆರಂಭಿಸಿದ ಸಂದರ್ಭದಲ್ಲಿ ನಮಗೆ ಸ್ಥಳೀಯರೇ ಹಲವಾರು ರೀತಿಯಲ್ಲಿ ಬೆಂಬಲ ನೀಡಿ, ಪ್ರೋತ್ಸಾಹಿಸಿದ್ದಾರೆ. ಆದರೆ ಇತ್ತೀಚೆಗೆ ಕೆಲವರಿಂದ ನಮಗೆ ಆಗುತ್ತಿರುವ ಹಲ್ಲೆ, ದೌರ್ಜನ್ಯಗಳಿಂದ ಮಹಿಳೆಯರು ಸೇರಿದಂತೆ ನಮ್ಮ ಕುಟುಂಬಗಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ನಾವೂ ನಿಮ್ಮವರೇ. ನಿಮ್ಮ ಜತೆಯಲ್ಲೇ ಬದುಕಲು ಇಚ್ಚಿಸುತ್ತೇವೆ’ ಎಂದು ಯುವಕ ವೆಂಕಟೇಶ್ ಆಗ್ರಹಿಸುತ್ತಾರೆ.

ಈ ಬಡ ಕುಟುಂಬಗಳಿಗೆ ನೈತಿಕ ಸ್ಥೆರ್ಯವನ್ನು ತುಂಬಿ ನ್ಯಾಯಯುತ ಹೋರಾಟಕ್ಕೆ ಬೆಂಬಲ ನೀಡಿರುವ ಡಿವೈಎಫ್‌ಐನ ಜಿಲ್ಲಾ ಸಮಿತಿ ಕೂಡಾ, ಸಂಬಂಧಪಟ್ಟವರು ಈ ಕುಟುಂಬಗಳಿಗೆ ನೆಮ್ಮದಿಯ ಜೀವನಕ್ಕೆ ಅವಕಾಶ ಕೊಡುವ ಜೊತೆಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿವೆ.

ಈ ಬಗ್ಗೆ ಈಗಾಗಲೇ ಸಮಿತಿಯ ಕಾರ್ಯದರ್ಶಿ ಸಂತೋಷ್ ಬಜಾಲ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರಿಗೂ ಮನವಿಯನ್ನು ಸಲ್ಲಿಸಿ ಸಮಸ್ಯೆ ಬಗೆಹರಿಸಲು ಒತ್ತಾಯಿಸಿದ್ದಾರೆ.

‘ನಾನು ಮದುವೆಯಾದ ಬಳಿಕ ಇಲ್ಲೇ ಬಂದು ನೆಲೆಸಿದ್ದೇನೆ. ಇದೀಗ ನನ್ನ ಮೊಮ್ಮಕ್ಕಳೂ ಇಲ್ಲೇ ಹುಟ್ಟಿ ಬೆಳೆಯುತ್ತಿದ್ದಾರೆ. ಯಾವುದೇ ಸಮಸ್ಯೆ ಇಲ್ಲದೆ ನಮ್ಮಷ್ಟಕ್ಕೆ ಮೀನು ಹಿಡಿದು ಜೀವನ ಸಾಗಿಸುತ್ತಿದ್ದ ನಮಗೆ ಕೆಲ ಸಮಯದಿಂದ ಆಗುತ್ತಿರುವ ತೊಂದರೆಗಳು ಭಯ ಮೂಡಿಸಿವೆ’

 ಭಾಗ್ಯಮ್ಮ (ಕುಟುಂಬದ ಹಿರಿಯ ಮಹಿಳೆ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X