Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಟೀಕೆ, ಅವಹೇಳನ, ಅವಮಾನಕ್ಕೆ ಜನರಿಂದಲೇ...

ಟೀಕೆ, ಅವಹೇಳನ, ಅವಮಾನಕ್ಕೆ ಜನರಿಂದಲೇ ಉತ್ತರ: ಸುಮಲತಾ ಅಂಬರೀಷ್

ಮಂಡ್ಯ: ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಬೃಹತ್ ಸಮಾವೇಶ

ವಾರ್ತಾಭಾರತಿವಾರ್ತಾಭಾರತಿ20 March 2019 10:37 PM IST
share
ಟೀಕೆ, ಅವಹೇಳನ, ಅವಮಾನಕ್ಕೆ ಜನರಿಂದಲೇ ಉತ್ತರ: ಸುಮಲತಾ ಅಂಬರೀಷ್

ಮಂಡ್ಯ, ಮಾ.20: ಪ್ರತಿಪಕ್ಷದವರು ಮಾಡುತ್ತಿರುವ ಟೀಕೆ, ಅವಹೇಳನ, ಅವಮಾನಕ್ಕೆ ನನ್ನನ್ನು ಕಣಕ್ಕಿಳಿಸಿರುವ ಜಿಲ್ಲೆಯ ಜನರೇ ಉತ್ತರಿಸಲಿದ್ದಾರೆಂದು ಸುಮಲತಾ ಅಂಬರೀಷ್ ಹೇಳಿದ್ದಾರೆ. 

ಲೋಕಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದ ನಂತರ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಏರ್ಪಡಿಸಿದ್ದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಅಧಿಕಾರದ ಮೋಹ, ಕೀರ್ತಿ ಗಳಿಸಲು ರಾಜಕಾರಣ ಪ್ರವೇಶಿಸಿಲ್ಲವೆಂದು ಸ್ಪಷ್ಟಪಡಿಸಿದರು.

ಕಳೆದ 30 ವರ್ಷಗಳಿಂದ ಚಿತ್ರರಂಗದಲ್ಲಿದ್ದು, ಪಂಚಭಾಷಾ ತಾರೆಯಾಗಿ ಹೆಸರು ಗಳಿಸಿದ್ದು, ರಾಜಕಾರಣದಿಂದ ಹೆಸರು, ಕೀರ್ತಿ ಗಳಿಸುವ ಅಗತ್ಯವಿಲ್ಲ. ಅಧಿಕಾರವೇ ಮುಖ್ಯವಾಗಿದ್ದರೆ ಕಾಂಗ್ರೆಸ್ ವರಿಷ್ಠರ ಶಿಫಾರಸು ಮಾಡಿದ್ದ ಸುಲಭವಾಗಿ ಗೆಲ್ಲಬಹುದಾಗಿದ್ದ ಅನ್ಯ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳದೆ ಪಕ್ಷದ ಬೆಂಬಲವಿಲ್ಲದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದೆ ಇದಕ್ಕೆ ಉತ್ತರವೆಂದು ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು.

ಅಂಬರೀಷ್ ಬಗ್ಗೆ ಮಂಡ್ಯ ಜಿಲ್ಲೆ ಜನರಲ್ಲಿದ್ದ ಪ್ರೀತಿ, ವಿಶ್ವಾಸ ಅನನ್ಯವಾದದ್ದು. ಆ ಪ್ರೀತಿಯ ಋಣ ತೀರಿಸಲು ಸ್ಪರ್ಧಿಸುತ್ತಿರುವುದಾಗಿ ಹೇಳಿದ ಅವರು, ಅಂಬರೀಷ್ ಎಂದೂ ಯಾರನ್ನೂ ಬೇಡಿದವರಲ್ಲ. ಕೊಡುಗೈ ವ್ಯಕ್ತಿತ್ವ ಅವರದಾಗಿತ್ತು. ಎಂದೂ ಪಕ್ಷದ ಬಿ-ಫಾರಂಗಾಗಿ ಯಾರನ್ನೂ ಕೇಳಿದವರಲ್ಲ. ಮನೆಗೆ ಹುಡುಕಿಕೊಂಡು ಬಂದು ಕೊಡುತ್ತಿದ್ದರು. ಆದರೆ, ಅವರ ಪತ್ನಿಯಾಗಿ ಕಣಕ್ಕಿಳಿದಿರುವ ತಮ್ಮನ್ನು ಆಶೀರ್ವದಿಸುವಂತೆ ಬೇಡುತ್ತಿರುವುದಾಗಿ ಮನವಿ ಮಾಡಿದರು.

ಮಳವಳ್ಳಿ ಹುಚ್ಚೇಗೌಡರ ಸೊಸೆ, ಅಂಬರೀಷ್ ಪತ್ನಿ, ಅಭಿಷೇಕ್ ತಾಯಿ, ಜಿಲ್ಲೆಯ ಸೊಸೆ ಎಂದು ಕಾರ್ಯಕರ್ತರು, ಅಭಿಮಾನಿಗಳ ಹರ್ಷೋದ್ಘಾರಗಳೊಂದಿಗೆ ಘೋಷಿಸಿದ ಅವರು, ಪ್ರತಿಸ್ಪರ್ಧಿಗಳ ಟೀಕೆ, ಅಪಮಾನ, ಅವಹೇಳನಕಾರಿ ಟೀಕೆಗಳಿಗೆ ಉತ್ತರಿಸಲಾರೆ. ಅದಕ್ಕೆ ಉತ್ತರ ನೀಡಬೇಕಾದವರು ನೀವೆಂದು ಮತದಾರರನ್ನು ಕೋರಿದರು.

ನಾವು ಮಾಡಿರುವ ಕೆಲಸವೇ ಪ್ರತಿಸ್ಪರ್ಧಿಗಳ ಟೀಕೆಗೆ ಪ್ರತ್ಯುತ್ತರ ನೀಡುತ್ತದೆಂದು ಅಂಬರೀಷ್ ಹೇಳುತ್ತಿದ್ದರು ಎಂಬುದನ್ನು ಸ್ಮರಿಸಿಕೊಂಡ ಅವರು, ತಾವು ಮಾಡಿದ ಕೆಲಸವನ್ನು ಎಂದೂ ಅವರು ಪ್ರಚಾರಕ್ಕೆ ಬಳಸಿಕೊಂಡಿರಲಿಲ್ಲ. ಸಂಸದರಾಗಿ, ಕೇಂದ್ರ ಹಾಗೂ ರಾಜ್ಯ ಮಂತ್ರಿಯಾಗಿ ಸಾಕಷ್ಟು ಕೆಲಸ ಮಾಡಿದ್ದರು. ಸಾಕಷ್ಟು ಜನರಿಗೆ ಸಹಾಯವನ್ನೂ ಮಾಡಿದ್ದರು. ಅದು ಜನರಿಗೆ ಗೊತ್ತಿರುವಂತಹ ವಿಚಾರ. ಅದನ್ನು ಹೇಳಬೇಕಾದವರೂ ಅವರೇ ಹೊರತು ನಾವಲ್ಲವೆಂದು ಪ್ರತಿಸ್ಪರ್ಧಿಗಳ ಆರೋಪಕ್ಕೆ ತಿರುಗೇಟು ನೀಡಿದರು.

ಚಿತ್ರರಂಗದವರು ನನ್ನ ಪ್ರಚಾರಕ್ಕೆ ಬರುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕಾರಣಕ್ಕೆ ಚಿತ್ರರಂಗದವರನ್ನು ಬಳಸಿಕೊಂಡಿರಲಿಲ್ಲವೆ ಎಂದು ಸುಮಲತಾ ಪ್ರಶ್ನಿಸಿದರು. ಮಗನ ಪರವಾಗಿ ತಂದೆ, ತಾಯಿಯಾದ ಅವರು ಪ್ರಚಾರ ಮಾಡಬಹುದು. ತಾಯಿಯಾದ ನನಗೆ ನನ್ನ ಮಕ್ಕಳಾದ ದರ್ಶನ್, ಯಶ್ ಪ್ರಚಾರ ಮಾಡುತ್ತಿರುವುದರಲ್ಲಿ ತಪ್ಪೇನಿದೆ ಎಂದು ಪರೋಕ್ಷವಾಗಿ ನಿಖಿಲ್ ಕುಟುಂಬದವರಿಗೆ ಟಾಂಗ್ ನೀಡಿದರು.

ದರ್ಶನ್, ಯಶ್ ಕುರಿತು ಲಘುವಾಗಿ ಮಾತನಾಡಿರುವ ಬಗ್ಗೆ ಅವರಿಗೆ ನೋವಾಗದಿರಬಹುದು. ಆದರೆ, ರಾಜ್ಯದಾದ್ಯಂತ ಇರುವ ಅವರ ಅಭಿಮಾನಿಗಳಿಗೆ ನೋವಾಗುತ್ತದೆ ಎಂಬುದನ್ನು ಮರೆಯಬಾರದು. ಅದರ ಪ್ರತಿಫಲವನ್ನು ಎದುರಿಸಬೇಕಾಗುತ್ತದೆಂದು ಕುಮಾರಸ್ವಾಮಿಯನ್ನು ಎಚ್ಚರಿಸಿದರು. ಅವರು ಟಿವಿ ಕೇಬಲ್ ಪ್ರಸಾರ ಕಟ್ ಮಾಡಿರಬಹುದು. ಆದರೆ, ಈ ಪ್ರೀತಿ ಕಟ್ ಮಾಡಲು ಸಾಧ್ಯವಿಲ್ಲ ಎಂದು ಅವರು, ಸಮಾವೇಶದ ಹಿನ್ನೆಲೆಯಲ್ಲಿ ಕೇಬಲ್ ನೆಟ್‍ವರ್ಕ್ ಕಟ್ ಮಾಡಿರುವುದನ್ನು ಪ್ರಸ್ತಾಪಿಸಿ ಎದಿರೇಟು ನೀಡಿದರು.

ನಾನು, ನನ್ನ ಮಗ ಬದುಕಲು ಅಗತ್ಯವಿರುವ ಎಲ್ಲವೂ ನಮ್ಮ ಬಳಿ ಇದೆ. ಅದಕ್ಕಾಗಿ ರಾಜಕೀಯಕ್ಕೆ ಬರುವ ಅಗತ್ಯವಿಲ್ಲ. ಪ್ರೀತಿ ವಿಶ್ವಾಸ ತೋರಿಸಿ ಚುನಾವಣಾ ರಾಜಕೀಯಕ್ಕೆ ಧುಮುಕಲು ಪ್ರೋತ್ಸಾಹ, ಪ್ರೇರಣೆ ನೀಡಿದ ಜನರ ಋಣ ತೀರಿಸುವ ಉದ್ದೇಶದಿಂದ ಕಣಕ್ಕಿಳಿದಿರುವುದಾಗಿ ಸುಮಲತಾ ಅಂಬರೀಷ್ ಸ್ಪಷ್ಟಪಡಿಸಿದರು.

ಗೆದ್ದರೆ ವಿದೇಶಕ್ಕೆ ಹಾರಿ ಹೋಗುತ್ತೇನೆಂದು ಟೀಕಿಸುತ್ತಿದ್ದಾರೆ. ಪತಿ ಅಂಬರೀಷ್ ಸಹಾಯದಿಂದ ಸಾಕಷ್ಟು ವಿದೇಶಗಳನ್ನು ಸುತ್ತಿದ್ದೇನೆ. ಈಗ ವಿದೇಶ ಸುತ್ತುವ, ನೆಲೆಸುವ ಉದ್ದೇಶವಾಗಲಿ, ಆಸೆಯಾಗಲಿ ಇಲ್ಲ. ನನ್ನ ವಿಶ್ವಾಸ, ಆತ್ಮಸ್ಥೈರ್ಯವನ್ನು ಕುಗ್ಗಿಸುವ ಉದ್ದೇಶದಿಂದ ಮಾಡಲಾಗುತ್ತಿರುವ ಈ ಅಪಪ್ರಚಾರಕ್ಕೆ ಕಿವಿಗೊಡಬೇಡಿರೆಂದು ಜನರಲ್ಲಿ ಮನವಿ ಮಾಡಿದರು.

ಈ ಹೋರಾಟದಲ್ಲಿ ನನಗೆ ಬೆಂಬಲವಾಗಿ ನಿಂತಿರುವ ರೈತಸಂಘದವರ ಕಷ್ಟದಲ್ಲಿ ನಾನು ಇರುತ್ತೇನೆ. ರೈತರ ಹೋರಾಟದ ಹೆಜ್ಜೆಯಲ್ಲಿ ನಾನೂ ಹೆಜ್ಜೆ ಹಾಕುತ್ತೇನೆ. ರೈತ ಸಂಘಟನೆ ಹೋರಾಟದಲ್ಲಿ ಕೈಜೋಡಿಸುತ್ತೇನೆ ಎಂದು ಭರವಸೆ ನೀಡಿದರು.

ಸುಮಲತಾ ಪುತ್ರ ಅಭಿಷೇಕ್, ನಟರಾದ ಯಶ್, ದರ್ಶನ್, ದೊಡ್ಡಣ್ಣ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಅಂಕಣಕಾರ ಬಿ.ಚಂದ್ರೇಗೌಡ, ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷ ಬೆಳ್ಳೂರು ಶಿವರಾಂ, ಜಿಪಂ ಮಾಜಿ ಅಧ್ಯಕ್ಷರಾದ ಸುರೇಶ್ ಕಂಠಿ, ಬಿ.ವಿವೇಕಾನಂದ, ಕೆಪಿಸಿಸಿ ಸದಸ್ಯರಾದ ಎಸ್.ಎಲ್.ಲಿಂಗರಾಜು, ಇಂಡುವಾಳು ಸಚ್ಚಿದಾನದ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಾಜೇಗೌಡ, ತಾಪಂ ಮಾಜಿ ಅಧ್ಯಕ್ಷ ತ್ಯಾಗರಾಜ್, ಅರವಿಂದ್, ಪಿ.ಎಂ.ಸೋಮಶೇಖರ್, ಜಿ.ಸಿ.ಆನಂದ್, ನಾಗಮಂಗಲದ ಅನ್ವರ್ ಪಾಷ, ಕೆ.ಆರ್.ನಗರದ ಶಿವಣ್ಣ ಮತ್ತಿತರ ಕಾಂಗ್ರೆಸ್ ಮುಖಂಡರು, ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್, ಸಂಘದ ಮುಖಂಡರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X