ಸೌಜನ್ಯ ಮಹಿಳಾ ಮಂಡಲದಲ್ಲಿ ರಂಗೋಲಿ ಪ್ರಾತ್ಯಕ್ಷಿಕೆ

ಮಂಗಳೂರು, ಮಾ.22: ಉರ್ವ ಹೊಗೆಬೈಲಿನ ಸೌಜನ್ಯ ಮಹಿಳಾ ಮಂಡಲದ ಆಶ್ರಯದಲ್ಲಿ ಮಹಿಳೆಯರಿಗಾಗಿ ಬುಧವಾರ ವಿವಿಧ ರೀತಿಯ ರಂಗೋಲಿ ಕಲೆಯ ಪ್ರಾತ್ಯಕ್ಷಿಕೆ ನಡೆಯಿತು.
ರಂಗೋಲಿ ಕಲೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತ ಕಲಾವಿದೆ ಚಂದ್ರಕಲಾ ಜಯರಾಮ ಆಚಾರ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಚುಕ್ಕಿ ರಂಗೋಲಿ, ಎಳೆರಂಗೋಲಿ, ರೇಖಾ ರಂಗೋಲಿಗಳನ್ನು ಹಾಕುವ ಹಾಗೂ ಬಣ್ಣ ತುಂಬುವ ಬಗ್ಗೆ ಎಳೆಎಳೆಯಾಗಿ ವಿವರಿಸಿ ಮಾಹಿತಿ ನೀಡಿದರು.
ರಂಗೋಲಿ ಕಲೆಯಲ್ಲಿ ಸಾಧನೆಗೈದ ಚಂದ್ರಿಕಾ ಜಯರಾಮ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಅಧ್ಯಕ್ಷೆ ಶಾಂತಾ ಎಲ್.ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಮಂಡಳಿಯ ಗೌರವಾಧ್ಯಕ್ಷೆ ಕೆ.ಎ.ರೋಹಿಣಿ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ರತ್ನಾವತಿ ಜೆ. ಬೈಕಾಡಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ರಾಜೇಶ್ವರಿ ಎಸ್. ರಾವ್ ವಂದಿಸಿದರು. ಶೈಲಜಾ ಎ. ರಾವ್ ಕಾರ್ಯಕ್ರಮ ನಿರೂಪಿಸಿದರು.
Next Story





