Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತ...

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತ ಮಣಿಪುರದ ಪತ್ರಕರ್ತ ತೀವ್ರ ಅಸ್ವಸ್ಥ

ಮೋದಿಯನ್ನು ಟೀಕಿಸಿದ್ದ ಕಿಶೋರ್ ಚಂದ್ರ

ವಾರ್ತಾಭಾರತಿವಾರ್ತಾಭಾರತಿ22 March 2019 9:00 PM IST
share
ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತ ಮಣಿಪುರದ ಪತ್ರಕರ್ತ ತೀವ್ರ ಅಸ್ವಸ್ಥ

ಹೊಸದಿಲ್ಲಿ, ಮಾ.22: ಕಳೆದ ನವೆಂಬರ್ 27ರಿಂದ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ)ಯಡಿ ಬಂಧನಲ್ಲಿರುವ ಮಣಿಪುರ ಮೂಲದ ಪತ್ರಕರ್ತ ಕಿಶೋರ್‌ಚಂದ್ರ ವಾಂಗ್‌ಚೆಮ್ ತೀವ್ರ ಅಸ್ವಸ್ಥಗೊಂಡಿದ್ದು ಇಂಫಾಲ್‌ನಲ್ಲಿರುವ ಜವಾಹರಲಾಲ್ ನೆಹರೂ ವೈದ್ಯವಿಜ್ಞಾನ ಸಂಸ್ಥೆ(ಜೆಐಎಂಎಸ್)ಗೆ ದಾಖಲಿಸಲಾಗಿದೆ ಎಂದು ಅವರ ಪತ್ನಿ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಣಿಪುರದ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್‌ರನ್ನು ಟೀಕಿಸಿದ್ದ ವಾಂಗ್‌ಚೆಮ್‌ರನ್ನು ಎನ್‌ಎಸ್‌ಎ ಅಡಿ ಜೈಲಿಗೆ ಹಾಕಲಾಗಿದೆ.

ವಾಂಗ್‌ಚೆಮ್ ಅಸೌಖ್ಯಗೊಂಡಿರುವ ಕಾರಣ ಮಾರ್ಚ್ 20ರಂದು ಅವರನ್ನು ಜೆಐಎಂಎಸ್‌ಗೆ ದಾಖಲಿಸಿರುವುದನ್ನು ವಕೀಲರು ತನಗೆ ತಿಳಿಸಿದರು . ತಕ್ಷಣ ತಾನು ಆಸ್ಪತ್ರೆಗೆ ಧಾವಿಸಿದ್ದು ಅದಾಗಲೇ ಅವರ ರಕ್ತ ಪರೀಕ್ಷೆ ಇತ್ಯಾದಿಗಳನ್ನು ನಡೆಸಲಾಗಿತ್ತು ಎಂದು ವಾಂಗ್‌ಚೆಮ್ ಪತ್ನಿ ರಂಜಿತಾ ಇಳಾಂಗಮ್ ಹೇಳಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಆಸ್ಪತ್ರೆಯಲ್ಲಿ ಬಿಗು ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾರ್ಚ್ 20ರಂದು ಮಣಿಪುರಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಈ ಬಂದೋಬಸ್ತ್ ಮಾಡಿರಬಹುದು ಎಂದು ಭಾವಿಸಿದ್ದೆ. ಆದರೆ ಕಿಶೋರ್‌ಚಂದ್ರ ವಾಂಗ್‌ಚೆಮ್‌ನನ್ನು ಚಿಕಿತ್ಸೆಗೆ ದಾಖಲಿಸಿದ ಕಾರಣ ಈ ಭದ್ರತಾ ವ್ಯವಸ್ಥೆ ಎಂದು ಬಳಿಕ ತಿಳಿಯಿತು. ಪತಿಯನ್ನು ಭೇಟಿ ಮಾಡಲೂ ತನಗೆ ಅವಕಾಶ ಮಾಡಿಕೊಡಲಿಲ್ಲ ಎಂದು ರಂಜಿತಾ ಇಳಾಂಗಮ್ ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಪತಿಯನ್ನು ಜೈಲಿನ ವ್ಯಾನ್‌ನತ್ತ ಕರೆದೊಯ್ಯುವಾಗ ತನ್ನೊಂದಿಗಿದ್ದ ಸಹೋದರ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿದ. ಆದರೆ ಭದ್ರತಾ ಸಿಬ್ಬಂದಿ ಈ ಫೋಟೋವನ್ನು ಡಿಲೀಟ್ ಮಾಡುವಂತೆ ಗದರಿದರು ಎಂದು ರಂಜಿತಾ ಹೇಳಿದ್ದಾರೆ.

ಪತಿಯ ದೇಹತೂಕದಲ್ಲಿ ಭಾರೀ ಇಳಿಕೆಯಾಗಿರುವುದನ್ನು ಕಂಡು ತನಗೆ ಆಘಾತವಾಯಿತು. ಅವರ ಅಸೌಖ್ಯಕ್ಕೆ ಕಾರಣ ತಿಳಿದುಕೊಳ್ಳುವ ಉದ್ದೇಶದಿಂದ ಅವರಿಗೆ ಬರೆದುಕೊಟ್ಟಿದ್ದ ಔಷಧದ ವಿವರ ಇರುವ ಚೀಟಿಯ ಫೋಟೋ ತೆಗೆಯಲೂ ಭದ್ರತಾ ಸಿಬ್ಬಂದಿ ಅವಕಾಶ ನೀಡಲಿಲ್ಲ. ಬಳಿಕ ಆಸ್ಪತ್ರೆಯ ಸಿಬ್ಬಂದಿಯಲ್ಲಿ ವಿಚಾರಿಸಿದಾಗ, ಊಟದ ಬಳಿಕ ವಾಂಗ್‌ಚೆಮ್‌ನ ರಕ್ತದಲ್ಲಿ ಸಕ್ಕರೆಯ ಅಂಶ 543ಕ್ಕೇರಿದ್ದ ಕಾರಣ ಆತ ಅಸ್ವಸ್ಥಗೊಂಡಿದ್ದನೆಂದು ತಿಳಿಸಿದರು.

ತಕ್ಷಣ ಪತಿಯೊಂದಿಗಿದ್ದ ಅಧಿಕಾರಿಯನ್ನು ಭೇಟಿಯಾಗಿ ಅವರಲ್ಲಿ ವಿಚಾರಿಸಿದೆ. ಆಸ್ಪತ್ರೆಯವರು ಕೆಲವೊಂದು ಆಹಾರ ಕ್ರಮ (ಪಥ್ಯ)ವನ್ನು ಬರೆದುಕೊಟ್ಟಿದ್ದಾರೆ. ಜೈಲಿನ ಅಧಿಕಾರಿಗಳು ಇದನ್ನು ಒದಗಿಸುತ್ತಾರೆಯೋ ಎಂಬುದು ತಿಳಿದಿಲ್ಲ. ನಿಗದಿತ ಆಹಾರವನ್ನು ಒದಗಿಸುವಂತೆ ಇದುವರೆಗೆ ಅನುಮತಿ ನೀಡಿಲ್ಲ ಎಂದು ಅಧಿಕಾರಿ ತಿಳಿಸಿದಾಗ ಇನ್ನಷ್ಟು ಆತಂಕಕ್ಕೆ ಒಳಗಾದೆ .ಮಾರ್ಚ್ 21ರಂದು ಕಿಶೋರ್‌ಚಂದ್ರನ ವಕೀಲರನ್ನು ಸಂಪರ್ಕಿಸಿದ ಜೈಲು ಅಧಿಕಾರಿಗಳು ಔಷಧದ ಪಟ್ಟಿಯೊಂದನ್ನು ನೀಡಿ ತಕ್ಷಣ ಅವನ್ನು ತಲುಪಿಸುವಂತೆ ತಿಳಿಸಿದ್ದಾರೆ. ಅದರಂತೆ ತನ್ನ ಸಹೋದರ ಔಷಧವನ್ನು ಖರೀದಿಸಿ ಜೈಲಿನ ಅಧಿಕಾರಿಗಳಿಗೆ ತಲುಪಿಸಿದ್ದಾನೆ. ಔಷಧೋಪಚಾರ ಮತ್ತು ಪಥ್ಯಕ್ರಮ ತಕ್ಷಣ ಆರಂಭವಾಗಿ ಪತಿ ಶೀಘ್ರ ಚೇತರಿಸಿಕೊಳ್ಳುತ್ತಾರೆ ಎಂದು ಆಶಿಸುವುದಾಗಿ ರಂಜಿತಾ ಹೇಳಿದ್ದಾರೆ.

ಮಾರ್ಚ್ 12ರಂದು ಜೈಲಿನಲ್ಲಿ ಪತಿಯನ್ನು ಭೇಟಿಯಾದಾಗ ಅವರು ದೃಷ್ಟಿ ಮಂದವಾಗುತ್ತಿರುವ ಬಗ್ಗೆ ದೂರಿದ್ದರು. ಓರ್ವ ನರ್ಸ್ ಆಗಿರುವ ತನಗೆ ಬಹುಷಃ ಸಕ್ಕರೆಯ ಪ್ರಮಾಣ ಹೆಚ್ಚುತ್ತಿದೆ ಎಂಬ ಅನುಮಾನ ಮೂಡಿದೆ. ಆದ್ದರಿಂದ ಸಕ್ಕರೆಯ ಪ್ರಮಾಣ ಪರೀಕ್ಷಿಸಿಕೊಳ್ಳಲು ತಿಳಿಸಿದ್ದೆ ಮತ್ತು ಮರುದಿನ ‘ಗ್ಲುಕೋಮೀಟರ್’ ಅನ್ನು ಜೈಲು ಅಧಿಕಾರಿಗಳಿಗೆ ನೀಡಿ ಪತಿಗೆ ತಲುಪಿಸುವಂತೆ ವಿನಂತಿಸಿದ್ದೆ. ಆದರೆ, ಕೆಲ ದಿನದ ಬಳಿಕ ಈ ಬಗ್ಗೆ ವಿಚಾರಿಸಲು ತೆರಳಿದಾಗ ಅಧಿಕಾರಿಗಳು ಗ್ಲುಕೋಮೀಟರ್ ವಾಪಾಸು ಕೊಂಡೊಯ್ಯುವಂತೆ ತಿಳಿಸಿದರು. ಇದೀಗ ಮಾರ್ಚ್ 26 ಅಥವಾ 27ರಂದು ಪತಿಯನ್ನು ಭೇಟಿಯಾಗುವ ಅವಕಾಶ ಮತ್ತೆ ದೊರಕಿದಾಗ ಸಂಪೂರ್ಣ ಮಾಹಿತಿ ಸಿಗಬಹುದು ಎಂದು ರಂಜಿತಾ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X