ಜೂಜಾಟ ಆಡುತ್ತಿದ್ದ ಐವರ ಬಂಧನ
ಮಂಗಳೂರು, ಮಾ.22: ಬೋಳೂರು ನದಿ ಕಿನಾರೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಜೂಜಾಟ (ಉಲಾಯಿ-ಪಿದಾಯಿ) ಆಡುತ್ತಿದ್ದ ಐವರನ್ನು ಬರ್ಕೆ ಪೊಲೀಸರು ಶುಕ್ರವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಥಳೀಯ ನಿವಾಸಿಗಳಾದ ಮಹೇಶ್, ಪ್ರವೀಣ್ ನಾಯ್ಕ, ಚೇತನ್, ಸಚಿನ್, ಇಮ್ರಾನ್ ಬಂಧಿತ ಆರೋಪಿಗಳು.
‘ಅಕ್ರಮವಾಗಿ ಹಣವನ್ನು ಪಣವಾಗಿ ಇಟ್ಟು ಜೂಜಾಟ ಆಡುತ್ತಿದ್ದಾರೆ’ ಎನ್ನುವ ಮಾಹಿತಿ ಮೇರೆಗೆ ಸ್ಥಳಕ್ಕೆ ಬರ್ಕೆ ಪೊಲೀಸರು ದಾಳಿ ನಡೆಸಿದರು. ಜೂಜಾಟ ಆಡುತ್ತಿದ್ದ ಐವರನ್ನು ವಶಕ್ಕೆ ಪಡೆದು ಅವರಿಂದ ಜೂಜಾಟಕ್ಕೆ ಬಳಸಿದ ಒಟ್ಟು 9,900 ರೂ. ನಗದು ಮತ್ತು ಪ್ಲಾಸ್ಟಿಕ್ ಶೀಟ್, 52 ಇಸ್ಪಿಟ್ ಎಲೆಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





