ಲೋಕಸಭೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ: ರಾಜಕೀಯ ನಾಯಕರ ಭಾವಚಿತ್ರವುಳ್ಳ 20 ಟಿ-ಶರ್ಟ್ ವಶ
ಮಂಗಳೂರು, ಮಾ.23: ಲೋಕಸಭೆ ಚುನಾವಣೆ ನೀತಿ ಸಂಹಿತೆ ಇದ್ದರೂ ಕೆಲವು ಬಟ್ಟೆ ವ್ಯಾಪಾರಿಗಳು ಮಾರಾಟ ಹೆಚ್ಚಿಸಿಕೊಳ್ಳಲು ರಾಜಕೀಯ ನಾಯಕರ ಭಾವಚಿತ್ರಗಳುಳ್ಳ ಟಿ-ಶರ್ಟ್ಗಳನ್ನು ನಿಯಮ ಬಾಹಿರವಾಗಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಅಂತಹ 20 ಟಿ-ಶರ್ಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಅನುಮತಿ ರಹಿತ ರಾಜಕೀಯ ಪ್ರಚಾರ ನಡೆಸುವುದು ಆರ್ಪಿ ಕಾಯ್ದೆ 171ಎಚ್ ಪ್ರಕಾರ ಅಪರಾಧವಾಗಿದೆ. ಈಗ ಕಂಡುಬಂದ ಪ್ರಕರಣವನ್ನು ಪರಿಶೀಲಿಸಲಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮಾರಾಟ ಹೆಚ್ಚುವ ಉದ್ದೇಶದಿಂದ ಈ ರೀತಿ ಚುನಾವಣಾ ಪ್ರಚೋದನೆ ಮಾಡುವುದು ಸಲ್ಲದು ಎಂದರು.
Next Story