ಅತ್ತ ಮಗುವಿನ ಬಾಯಿಗೆ ಅಂಟು ಒರೆಸಿದ ತಾಯಿ
ಚಪ್ರ, ಮಾ. 24: ಅತ್ತು ಕೂಗಾಡಿದ ಮಗನನ್ನು ಸುಮ್ಮನಾಗಿಸಲು ತಾಯಿಯೋರ್ವಳು ಮಗನ ಬಾಯಿಯನ್ನು ಅಂಟಿನಿಂದ ಮುಚ್ಚಿದ ದಾರುಣ ಘಟನೆ ಬಿಹಾರ್ನ ಚಪ್ರದಲ್ಲಿ ನಡೆದಿದೆ.
ಮಗುವಿನ ತಂದೆ ಕೆಲಸ ಮುಗಿಸಿ ಬಂದಾಗ ಮಗು ವೌನವಾಗಿರುವುದನ್ನು ಕಂಡ. ಅಲ್ಲದೆ ಬಾಯಿಯಿಂದ ನೊರೆ ಬರುತ್ತಿರುವುದು ಕಾಣಿಸಿತು. ಈ ಬಗ್ಗೆ ಪತ್ನಿಯಲ್ಲಿ ವಿಚಾರಿಸಿದಾಗ ಅಂಟು ಒರೆಸಿದ್ದಾಗಿ ಉತ್ತರಬಂತು. ಕೂಡಲೆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮಗು ಅಪಾಯದಿಂದ ಪಾರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
Next Story