4.21 ಕೋಟಿ ರೂ.ನಗದು, 23 ಲಕ್ಷ ರೂ. ಮೌಲ್ಯದ ಮದ್ಯ ವಶ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.24: ಪ್ಲೈಯಿಂಗ್ ಸ್ಕ್ವಾಡ್ಗಳು, ಸ್ಟಾಟಿಕ್ ಸ್ಕ್ವಾಡ್ಗಳು ಹಾಗೂ ಪೊಲೀಸ್ ಪ್ರಾಧಿಕಾರಿಗಳು 4.21 ಕೋಟಿ ನಗದು ಹಾಗೂ 23.28 ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಕಾರ್ಯಾಚರಣೆ ಮಾಡಿ ವಿವಿಧ ವಲಯಗಳಿಂದ 4,21,72,341 ರೂ. ನಗದು, 23.28 ಮೌಲ್ಯದ 2058 ಲೀಟರ್ ಮದ್ಯ ಹಾಗೂ 4.84 ಲಕ್ಷ ಮೌಲ್ಯದ 119 ಕೆಜಿ ಮಾದಕ ದ್ರವ್ಯ, 66.53 ಲಕ್ಷ ಮೌಲ್ಯದ ಇತರೆ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದುವರೆಗೂ 207 ಎಫ್ಐಆರ್ಗಳನ್ನು ದಾಖಲಿಸಿಕೊಳ್ಳಲಾಗಿದ್ದು, 1.67 ಕೋಟಿ ನಗದನ್ನು ಆದಾಯ ಇಲಾಖೆಯು ವಶಪಡಿಸಿಕೊಂಡಿದೆ.
ಅಬಕಾರಿ ಇಲಾಖೆಯು 19.58 ಕೋಟಿ ಮೌಲ್ಯದ 4.55 ಲಕ್ಷ ಲೀಟರ್ ಗಳಷ್ಟು ಮದ್ಯವನ್ನು, 3 ಲಕ್ಷ ಮೌಲ್ಯದ 10 ಕೆಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. 1133 ಗಂಭೀರ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 1125 ಮದ್ಯದ ಪರವಾನಿಗೆ ಉಲ್ಲಂಘಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ.
ಮತದಾರರ ಸಹಾಯವಾನಿ ಮೂಲಕ 45,362 ಕರೆಗಳು ಸ್ವೀಕರಿಸಿದ್ದು, 39,248 ಕರೆಗಳಿಂದ ಮಾಹಿತಿ ಕೋರಿದ್ದಾರೆ. 437 ಜನರು ಹಿಮ್ಮಾಹಿತಿ ನೀಡಿದ್ದು, 3198 ಸಲಹೆಗಳು ಬಂದಿವೆ. ಇನ್ನುಳಿದಂತೆ 2479 ದೂರುಗಳನ್ನು ನೀಡಲಾಗಿದೆ. ಇದಲ್ಲದೆ ಎನ್ಜಿಆರ್ಎಸ್ ಪೋರ್ಟಲ್ನಲ್ಲಿ 3926 ದೂರುಗಳು ನೋಂದಾಯಿಸಿದ್ದು, ಅದರಲ್ಲಿ 2774 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ.
ಸಿವಿಜಿಲ್ ಆ್ಯಪ್ ಮೂಲಕ 776 ದೂರುಗಳು ಬಂದಿದ್ದು, 144 ಅನ್ನು ಇತ್ಯರ್ಥ ಮಾಡಲಾಗಿದೆ. ಇಮೇಲ್ ಹಾಗೂ ಪತ್ರಗಳ ಮೂಲಕ 163, ಪತ್ರಿಕೆಗಳಿಂದ 60, ಟಿವಿಗಳಿಂದ 35, ಸಾಮಾಜಿಕ ಜಾಲತಾಣಗಳಿಂದ 32 ದೂರಗಳು ಸ್ವೀಕರಿಸಿದ್ದು, 282 ದೂರುಗಳನ್ನು ಇತ್ಯರ್ಥ ಮಾಡಲಾಗಿದೆ. ಸುವಿಧಾ ಮೂಲಕ 620 ಅರ್ಜಿಗಳು ಸ್ವೀಕರಿಸಿದ್ದು, 438 ಕ್ಕೆ ಅನುಮತಿ ನೀಡಲಾಗಿದೆ.







