‘ಹರ್ ಹರ್ ಮೋದಿ’ ಎಂದು ಕೂಗುತ್ತಾ ದಲಿತ ವ್ಯಕ್ತಿಗೆ ಥಳಿಸಿದ ದುಷ್ಕರ್ಮಿಗಳು
‘ಚೌಕಿದಾರ್’ ಪದದ ಕುರಿತು ವಾಗ್ವಾದ

ಫರುಖಾಬಾದ್, ಮಾ. 23: ‘ಚೌಕಿದಾರ್’ ಪದದ ಕುರಿತು ನಡೆದ ವಾಗ್ವಾದದ ಹಿನ್ನೆಲೆಯಲ್ಲಿ ದಲಿತ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಸೈಂಪಿ ವಾಲ್ಮೀಕಿ ಅವರಿಗೆ ಮೇಲ್ಜಾತಿಯ ವ್ಯಕ್ತಿಗಳು ಥಳಿಸಿದ ಘಟನೆ ಉತ್ತರಪ್ರದೇಶದ ಫರೂಕಾಬಾದ್‌ನಲ್ಲಿ ಶುಕ್ರವಾರ ನಡೆದಿದೆ.
ನಾಗ್ಲಾ ಗ್ರಾಮದ ತನ್ನ ಮನೆಯ ಕಂಪೌಂಡ್ ನಲ್ಲಿ ಕುಳಿತುಕೊಂಡಿದ್ದ ಸೈಂಪಿ ಪ್ರಧಾನಿ ಮೋದಿ ಅವರ ಅಭಿಯಾನವನ್ನು ತಮಾಷೆ ಮಾಡುತ್ತಾ ‘ನಾನು ಕೂಡ ಚೌಕಿದಾರ್’ ಎಂದು ಗಟ್ಟಿಯಾಗಿ ಕೂಗಿಕೊಂಡಿದ್ದ. ಈ ಸಂದರ್ಭ ಆ ದಾರಿಯಾಗಿ ಹಾದು ಹೋಗುತ್ತಿದ್ದ ಕೆಲವರು ಸೈಂಪಿಗೆ ಹರ್ ಹರ್ ಮೋದಿ ಎಂದು ಕೂಗುತ್ತಾ ಥಳಿಸಿದರು.
ಸುದ್ದಿ ಹರಡುತ್ತಿದ್ದಂತೆ ವಾಲ್ಮಿಕಿ ಸಮುದಾಯದ ಕೆಲವು ಸದಸ್ಯರು ಸೇರಿದರು ಹಾಗೂ ಸೈಂಪಿಯನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿದರು. ಆರೋಪಿಗಳ ವಿರುದ್ಧ ಎಸ್‌ಸಿ, ಎಸ್‌ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





