Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಅಬುಧಾಬಿ: ವೈಭವದ ಮಂಗಳೂರು ಕ್ರಿಕೆಟ್...

ಅಬುಧಾಬಿ: ವೈಭವದ ಮಂಗಳೂರು ಕ್ರಿಕೆಟ್ ಉತ್ಸವ

ವಾರ್ತಾಭಾರತಿವಾರ್ತಾಭಾರತಿ24 March 2019 11:38 PM IST
share
ಅಬುಧಾಬಿ: ವೈಭವದ ಮಂಗಳೂರು ಕ್ರಿಕೆಟ್ ಉತ್ಸವ

ಅಬುಧಾಬಿ, ಮಾ. 24: ಮಂಗಳೂರು ಕಪ್ 2019 (ಆವೃತಿ-7) ಮತ್ತು ಡ್ಯಾನ್ಸ್‌ಪಿರೇಶನ್ ಕಾರ್ಯಕ್ರಮ ಮಂಗಳೂರು ಕ್ರಿಕೆಟ್ ಕ್ಲಬ್ ನೇತೃತ್ವದಲ್ಲಿ ಇಲ್ಲಿನ ಶೇಕ್ ಝಯೇದ್ ಅಂತರ್‌ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮೈದಾನದಲ್ಲಿ ನಡೆಯಿತು.

ಎಂಸಿಸಿ ಉಪಾಧ್ಯಕ್ಷ ಯಾಹ್ಯಾ ಅಬ್ಬಾಸ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಮನುಷ್ಯನ ವಿಕಸನಕ್ಕೆ ಕ್ರೀಡೆ ಅತ್ಯುತ್ತಮ ಸಾಧನ ಎಂದು ಅವರು ತಿಳಿಸಿದರು.

ಪಂದ್ಯಾವಳಿಯ ಆರಂಭಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸೂಚಿಸಿ ಎರಡು ನಿಮಿಷಗಳ ಮೌನ ಪ್ರಾರ್ಥನೆ ನಡೆಸಲಾಯಿತು.

ಎಂಸಿಸಿ ಅಧ್ಯಕ್ಷ ಲತೀಫ್ ಕೆ.ಎಚ್ ಅಗಲಿದ ಯೋಧರನ್ನು ಸ್ಮರಿಸಿದರು ಮತ್ತು ಹುತಾತ್ಮ ಯೋಧರ ಕುಟುಂಬಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲು ಎಂದು ಪ್ರಾರ್ಥಿಸಿದರು. ಅಬುಧಾಬಿ ಕ್ರಿಕೆಟ್ (ಎಡಿಸಿ) ಸಿಇಒ ಮ್ಯಾಥ್ಯೂ ಬೌಚರ್ ಮಂಗಳೂರಿನ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕ್ರಿಕೆಟ್ ಪಂದ್ಯಾಟವನ್ನು ವೀಕ್ಷಿಸಿದರು. ಕಾರ್ಯಕ್ರಮದ ಆಯೋಜಿಸಿದ ರೀತಿ ಮತ್ತು ವೈವಿಧ್ಯತೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವರ್ಷದ ಅತೀದೊಡ್ಡ ಎನ್‌ಆರ್‌ಐ ಕ್ರಿಕೆಟ್ ಪಂದ್ಯಾವಳಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಲು ಹತ್ತು ಸಾವಿರಕ್ಕೂ ಅಧಿಕ ಜನರು ಆಗಮಿಸಿ ದ್ದರು. ಯುಎಇ ಸುತ್ತಮುತ್ತಲ ಹದಿನಾಲ್ಕು ಭಾರತೀಯ ಕ್ರಿಕೆಟ್ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದವು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಲವು ರೀತಿಯ ನೃತ್ಯಗಳು ನೋಡುಗರನ್ನು ಮಂತ್ರಮುಗ್ಧಗೊಳಿಸಿತು. ಎಬಿಸಿಡಿ ಚಿತ್ರದ ನಟ, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್  ಖ್ಯಾತಿಯ ಸೆಲೆಬ್ರಿಟಿ ತೀರ್ಪುಗಾರ ಕಿಶೋರ್ ಅಮನ್ ಶೆಟ್ಟಿ, ಈಟಿವಿ ಖ್ಯಾತಿಯ ಸೆಲೆಬ್ರಿಟಿ ತೀರ್ಪುಗಾತಿ ಆಂಶು ಪ್ರಿಯಾ ಮತ್ತು ಯತೀಶ್ ಅಮೀನ್ ಸಾಂಸಕೃತಿಕ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು.

ಎಂ.ಕೆ ಬಾಯ್ಸ, ಪ್ಯಾರಿಸ್ ಕಿಚನ್, ರಿಲಯೇಬಲ್ ರೈಡರ್ಸ್, ಶಬಿಯಾ ವಾರಿಯರ್ಸ್, ಮಂಗಳೂರ್ ಇಂಡಿಯನ್ಸ್, ವಾರಿಯರ್ಸ್ ಕಟೀಲ್, ಅಬೋನ್ ಸಿಸಿ, ಏಮ್ಸ್ ಕ್ರಿಕೆಟರ್ಸ್, ಇಲೆವೆನ್ ವಾರಿಯರ್ಸ್, ಕೆಎಫ್‌ಸಿ ಸ್ಟ್ರೈಕರ್ಸ್, ಅಲ್ ಸಿತಾರ, ಬ್ಲಾಕ್ ಕ್ಯಾಪ್ಸ್, ಸಮ್ಟೆಕ್ ರೈಸಿಂಗ್, ಎಸ್‌ಎಂಜಿಟಿ ಮುಸ್ಫಾ ಹೀಗೆ 14 ತಂಡಗಳು ಭಾಗವಹಿಸಿದ್ದವು.

ಬಹುಮಾನ ವಿತರಣೆ ಸಮಯದಲ್ಲಿ ಎಂಸಿಸಿ ಅಧ್ಯಕ್ಷ ಲತೀಫ್ ಕೆ.ಎಚ್ ಯುಎಇ ಸಂಸ್ಥಾಪಕ ಶೇಕ್ ಝಯೇದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರಿಗೆ ಕೃತಜ್ಞತೆ ಸೂಚಿಸಿದರು. ಅಂತಿಮ ಹಣಾಹಣಿಯಲ್ಲಿ ಕೆಎಫ್‌ಸಿ ಸ್ಟ್ರೈಕರ್ಸ್ ತಂಡವನ್ನು ಎಬೋನ್ ಸಿಸಿ ತಂಡ ಸೋಲಿಸಿ ಕಪ್ ಗೆದ್ದುಕೊಂಡಿತು. ಎಬೋನ್ ಸಿಸಿ ಟ್ರೋಫ್ ಮತ್ತು 11,000 ದಿರ್ಹಮ್ ನಗದು ಪಡೆದರೆ ಕೆಎಫ್‌ಸಿ ಸ್ಟ್ರೈಕರ್ಸ್ ತಂಡ ಟ್ರೋಫಿ ಮತ್ತು 6,000 ದಿರ್ಹಮ್ ನಗದು ಗೆದ್ದಿತು.

ಸಮಾರೋಪ ಸಮಾರಂಭದಲ್ಲಿ ಖ್ಯಾತ ಸಾಮಾಜಿಕ ಕಾರ್ಯಕರ್ತರು ಮತ್ತು ಎನ್‌ಆರ್‌ಐ ಉದ್ಯಮಿಗಳು ಉಪಸ್ಥಿತರಿದ್ದರು. ವಾಲ್ಟರ್ ಅಲ್ಮೆಡ, ವ್ಯವಸ್ಥಾಪನಾ ನಿರ್ದೇಶಕ ರೀಗಲ್ ಫರ್ನಿಶಿಂಗ್ ಸ್ಟೋರೇಜ್ ಸಿಸ್ಟಮ್, ಕ್ವೀನ್ ವಿಕ್ಟೋರಿಯ ಪ್ರಶಸ್ತಿ ವಿಜೇತ ಸೇಫ್ ಲೈನ್ ಗ್ರೂಪ್ ಆಫ್ ಕಂಪೆನೀಸ್‌ನ ವ್ಯವಸ್ಥಾಪನಾ ನಿರ್ದೇಶಕ ಅಬೂಬಕ್ಕರ್ ಕುತ್ತಿಕೋಲ್, ಆಸಿಫ್ ಮತ್ತು ಅಲ್ತಾಫ್ ವ್ಯವಸ್ಥಾಪನಾ ನಿರ್ದೇಶಕರು ಸಮ್ಟೆಕ್ ಮಲ್ಟಿಲೈನ್ ಟ್ರೇಡಿಂಗ್ ಮುಸ್ಫಾ, ಅಕ್ರಂ ವ್ಯವಸ್ಥಾಪನಾ ನಿರ್ದೇಶಕ ಅಲ್ ಸಿತಾರಾ ಗ್ರೂಪ್ ಅಬುಧಾಬಿ, ರಫೀಕ್ ಮತ್ತು ನೂರುದ್ದೀನ್ ವ್ಯವಸ್ಥಾಪಕರು ಬಿಂದರೈ ಮತ್ತು ಪಾಟ್ನರ್ಸ್, ಜೊಯೆಲ್ ಕ್ರಾಸ್ತಾ ವ್ಯವಸ್ಥಾಪನಾ ನಿರ್ದೇಶಕ ಬ್ರಾಡ್‌ವೇ ಇವೆಂಟ್ ಮ್ಯಾನೆಜ್ಮೆಂಟ್, ಶೌಕತ್ ವ್ಯವಸ್ಥಾಪನಾ ನಿರ್ದೇಶಕ ಪೆಟ್ರೊ ಗಲ್ಫ್, ಶಹನವಾಝ್ ಹಕೀಂ ಯೂಸುಫ್ ಅಬುಧಾಬಿ ಕ್ರಿಕೆಟ್, ಮನ್ಸೂರ್ ವ್ಯವಸ್ಥಾಪಕ ಕ್ರಾಸ್‌ವಿಂಡ್, ಸಂತೋಶ್ ರೈ ರಮೀ ಗ್ರೂಪ್ ಆಫ್ ಕಂಪೆನೀಸ್, ಸಚಿನ್ ಬ್ರಾಡ್‌ವೇ ಇವೆಂಟ್ ಮ್ಯಾನೆಜ್ಮೆಂಟ್, ಫೈಝಾನ್ ಖಾತಿಬ್, ಮುಹಮ್ಮದ್ ಮನ್ಸೂರ್ ಉಜಿರೆ ಆಪರೇಶನ್ಸ್ ಮ್ಯಾನೇಜರ್ ಇಎನ್‌ಇ ಅಬುದಾಬಿ ಪೋರ್ಟ್ಸ್, ಸಲಾಮ್ ಕೆ.ಎಚ್ ಹೊನೊರ್, ಎಂಸಿಸಿ ಮಂಡಳಿ ಸದಸ್ಯರು ಮತ್ತು ಕಾರ್ಯಕಾರಿ ಸದಸ್ಯರು ಉಪಸ್ಥಿತರಿದ್ದರು.

ಹಿಸ್ನ ಇಂಟರ್‌ನ್ಯಾಶನಲ್, ರೀಗಲ್ ಸೇಫ್‌ಲೈನ್, ಸಮ್ಟೆಕ್, ಬಿಂದಿರೈ, ಯುಎಇ ಎಕ್ಸ್‌ಚೇಂಜ್, ಸನನ ಟ್ರೇಡಿಂಗ್, ಸ್ಟೆಪ್ ಆ್ಯಂಡ್ ಸ್ಟ್ರಿಂಗ್ಸ್, ರಮೀ ಗ್ರೂಪ್, ಬ್ರಾಡ್‌ವೇ ಇವೆಂಟ್ ಮ್ಯಾನೆಜ್ಮೆಂಟ್, ಕ್ರಾಸ್‌ವಿಂಡ್, ರಾಯಲ್ ಇನ್ಸ್‌ಟಿಟ್ಯೂಟ್ ಆಫ್ ಮ್ಯೂಸಿಕ್ ಆ್ಯಂಡ್ ಆರ್ಟ್, ಅಬುಧಾಬಿ ಕ್ರಿಕೆಟ್ ಕಂಪೆನಿಗಳು ಎಂಸಿಸಿ ಜೊತೆ ಕಾರ್ಯಕ್ರಮ ಆಯೋಜನೆಗೆ ಕೈಜೋಡಿಸಿದ್ದವು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X