ಉ.ಪ್ರದೇಶ: ಬಿಎಸ್ಪಿಯ ಮೂವರು ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆ

ಲಕ್ನೊ, ಮಾ.24: ಬಹುಜನ ಸಮಾಜ ಪಕ್ಷ(ಬಿಎಸ್ಪಿ)ಯ ಮೂವರು ಮಾಜಿ ಶಾಸಕರು ಹಾಗೂ ಆರ್‌ಜೆಡಿಯ ಮುಖಂಡ ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬಿಎಸ್ಪಿಯ ಮಾಜಿ ಶಾಸಕರಾದ ಡಾ. ಧರ್ಮಪಾಲ್ ಸಿಂಗ್, ಭಗವಾನ್ ಸಿಂಗ್ ಕುಶ್ವಾಹಾ ಹಾಗೂ ಠಾಕೂರ್ ಸೂರಜ್‌ಪಾಲ್ ಸಿಂಗ್, ಆರ್‌ಜೆಡಿಯ ಮುಖಂಡ ಅನಿಲ್ ಚೌಧರಿ ಉತ್ತರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಈ ಸಂದರ್ಭ ಮಾತನಾಡಿದ ರಾಜ್‌ಬಬ್ಬರ್, ಫತೇಪುರ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಗ್ರಾದ ಜನತೆಯ ಆಶಯದಂತೆ ಇಲ್ಲಿಗೆ ಬಂದಿದ್ದೇನೆ. ಇದು ನನ್ನ ಹುಟ್ಟೂರು ಕೂಡಾ ಆಗಿದೆ ಎಂದು ಹೇಳಿದರು. ಫತೇಪರ್ ಸಿಕ್ರಿ ಕ್ಷೇತ್ರದಲ್ಲಿ ರಾಜ್‌ಬಬ್ಬರ್‌ರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.
Next Story





