ಅಧ್ಯಯನಕ್ಕಾಗಿ ಮೌಂಟ್ ಎವರೆಸ್ಟ್ ಹತ್ತಲಿರುವ ಅಮೆರಿಕ ವಿಜ್ಞಾನಿಗಳು

ಕಠ್ಮಂಡು (ನೇಪಾಳ), ಮಾ. 27: ಹಿಮಾಲಯ ಪರ್ವತ ಮತ್ತು ನೀರ್ಗಲ್ಲುಗಳ ಮೇಲೆ ಜಾಗತಿಕ ತಾಪಮಾನ ಬೀರಿರುವ ಪರಿಣಾಮದ ಅಧ್ಯಯನ ಮಾಡುವುದಕ್ಕಾಗಿ ಅಮೆರಿಕದ ವಿಜ್ಞಾನಿಗಳ ತಂಡವೊಂದು ಮೌಂಟ್ ಎವರೆಸ್ಟ್ ಪ್ರದೇಶದಲ್ಲಿ ಇಳಿದಿದೆ.
ವೆಸ್ಟರ್ನ್ ವಾಶಿಂಗ್ಟನ್ ವಿಶ್ವವಿದ್ಯಾನಿಲಯದ ಜಾನ್ ಆಲ್ ನೇತೃತ್ವದ ತಂಡವು ಮುಂದಿನ ಎರಡು ತಿಂಗಳನ್ನು ಈ ವಲಯದಲ್ಲಿ ಕಳೆಯಲಿದೆ ಹಾಗೂ ಮೇ ತಿಂಗಳಲ್ಲಿ ಜಗತ್ತಿನ ಅತ್ಯುನ್ನತ ಶಿಖರವನ್ನು ಏರಲಿದೆ. ಈ ಅವಧಿಯಲ್ಲಿ, ತಂಡದ ಸದಸ್ಯರು ಮಾದರಿಗಳನ್ನು ಸಂಗ್ರಹಿಸುತ್ತಾರೆ ಹಾಗೂ ಮಂಜುಗಡ್ಡೆ, ಹಿಮ ಮತ್ತು ಸಸ್ಯರಾಶಿಯ ಅಧ್ಯಯನ ನಡೆಸುತ್ತಾರೆ.
ಹಿಮಾಲಯದಿಂದ ಮಾದರಿಗಳು ಮತ್ತು ದತ್ತಾಂಶಗಳನ್ನು ತಂದು ನೇಪಾಳದ ವಿಶ್ವವಿದ್ಯಾಲಯವೊಂದರಲ್ಲಿ ಆ ದೇಶದ ಸರಕಾರಿ ಸಂಸ್ಥೆಗಳ ನೆರವಿನೊಂದಿಗೆ ಅಧ್ಯಯನ ನಡೆಸುವ ಯೋಜನೆಯನ್ನು ಅಮೆರಿಕದ ತಂಡ ಹೊಂದಿದೆ. ತಂಡವು ಈಗಿನ ದತ್ತಾಂಶಗಳು ಮತ್ತು 2009ರಲ್ಲಿ ಸಂಗ್ರಹಿಸಲಾದ ದತ್ತಾಂಶಗಳನ್ನು ತುಲನೆ ಮಾಡಲಿದ್ದಾರೆ.
Next Story





