ಕೆನಡಾ ವಿರುದ್ಧ ಭಾರತಕ್ಕೆ 7-3 ಭರ್ಜರಿ ಜಯ
►ಅಝ್ಲನ್ ಶಾ ಹಾಕಿ ಕಪ್ ►ಮಂದೀಪ್ ಸಿಂಗ್ ಹ್ಯಾಟ್ರಿಕ್

ಇಪೊ (ಮಲೇಶ್ಯ), ಮಾ.27: ಸ್ಟ್ರೈಕರ್ ಮಂದೀಪ್‌ಸಿಂಗ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತ ಹಾಕಿ ತಂಡ ಕೆನಡಾವನ್ನು ಬುಧವಾರ 7-3 ಅಂತರದಿಂದ ಬಗ್ಗುಬಡಿದಿದೆ. ಈ ಮೂಲಕ ಭಾರತ ಟೂರ್ನಿಯಲ್ಲಿ ತಾತ್ವಿಕವಾಗಿ ಫೈನಲ್ ತಲುಪಿದೆ.
12ನೇ ನಿಮಿಷದಲ್ಲಿ ವರುಣ್‌ಕುಮಾರ್ ಮೂಲಕ ಭಾರತಕ್ಕೆ ಮೊದಲ ಗೋಲು ಸಂದಾಯವಾಯಿತು. ಬಿರುಸಿನ ಆಟವಾಡಿದ 24 ವರ್ಷ ವಯಸ್ಸಿನ ಮಂದೀಪ್, ಮೂರು ಗೋಲುಗಳ (20, 27 ಹಾಗೂ 29ನೇ ನಿಮಿಷ) ಮೂಲಕ ಭಾರತದ ಮುನ್ನಡೆಯನ್ನು ಶೀಘ್ರಗತಿಯಲ್ಲಿ ಏರಿಸಿದರು. ಪ್ರಥಮಾರ್ಧ ಮುಕ್ತಾಯವಾದಾಗ ಭಾರತ 4-0ಯಿಂದ ಮುಂದಿತ್ತು. ಆ ಬಳಿಕ 34ನೇ ನಿಮಿಷದಲ್ಲಿ ಕೆನಡಾದ ಮಾರ್ಕ್ ಪಿಯರ್ಸನ್ ತಮ್ಮ ತಂಡದ ಪರವಾಗಿ ಗೋಲಿನ ಖಾತೆ ತೆರೆದರು.
ಇದಾದ ಬಳಿಕವೂ ಭಾರತದ ಆಟಗಾರರು ತಮ್ಮ ಪಾರಮ್ಯವನ್ನು ಮುಂದುವರಿಸಿದರು. ಅಮಿತ್ ರೋಹಿದಾಸ್ (39), ವಿವೇಕ್ ಪ್ರಸಾದ್ (55ನೇ) ಹಾಗೂ ನೀಲಕಂಠ ಶರ್ಮಾ (58ನೇ ನಿಮಿಷ) ಗೋಲು ಬಾರಿಸುವ ಮೂಲಕ ಪಂದ್ಯವನ್ನು ಕೆನಡಾದಿಂದ ಭಾರೀ ದೂರ ಕೊಂಡೊಯ್ದರು. ಈ ಮಧ್ಯೆ ಕೆನಡಾದ ಫಿನ್ ಬೂತ್‌ರಾಯ್ಡೆ (50ನೇ ನಿಮಿಷ) ಹಾಗೂ ಜೇಮ್ಸ್ ವಾಲ್ಲೇಸ್ (57ನೇ ನಿಮಿಷ) ಗೋಲು ಬಾರಿಸಿದರೂ ಭಾರತದ ಸ್ಕೋರ್‌ನ್ನು ತಲುಪಲಾಗಲಿಲ್ಲ.
ಈ ಜಯದೊಂದಿಗೆ ಭಾರತ ಟೂರ್ನಿಯಲ್ಲಿ 3 ಗೆಲುವು, ಒಂದು ಡ್ರಾ ಮೂಲಕ ತನ್ನ ಅಜೇಯ ಓಟವನ್ನು ಮುಂದುವರಿಸಿತು. ಅಲ್ಲದೆ ರೌಂಡ್ ರಾಬಿನ್ ಲೀಗ್ ಮಾದರಿ ಪಂದ್ಯಾವಳಿಯ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ಮೊದಲ ಸ್ಥಾನ ಗಳಿಸಿತು.
ಕೊರಿಯ ತಂಡ 7 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಆತಿಥೇಯ ಮಲೇಶ್ಯ ಹಾಗೂ ಕೆನಡಾ 6 ಅಂಕಗಳನ್ನು ಹೊಂದಿವೆ.
ಪೋಲೆಂಡ್‌ವಿರುದ್ಧಶುಕ್ರವಾರಭಾರತತನ್ನಕೊನೆಯಲೀಗ್‌ಪಂದ್ಯವನ್ನುಆಡಲಿದೆ.







