ಕನ್ಹಯ್ಯ ಕುಮಾರ್- ತೇಜಸ್ವಿ ಸೂರ್ಯ ಮಾತುಕತೆ

ಬೆಂಗಳೂರು,ಮಾ.28: ಕಮ್ಯುನಿಸ್ಟ್ ಪಕ್ಷದ ನಾಯಕ ಕನ್ಹಯ್ಯ ಕುಮಾರ್ ಬಿಹಾರದಲ್ಲಿ ಸ್ಪರ್ಧಿಸುತ್ತಿದ್ದು, ಅವರೊಂದಿಗೆ ಮಾತನಾಡಿದ್ದೇನೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಕನ್ಹಯ್ಯ ಕುಮಾರ್ ಬಿಹಾರದಲ್ಲಿ ಸ್ಪರ್ಧಿಸುತ್ತಿದ್ದು, ಅವರೊಂದಿಗೆ ಮಾತನಾಡಿದ್ದೇನೆ. ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿಯೊಂದಿಗೂ ಮಾತನಾಡಿದ್ದೇನೆ. ಯುವಕರು ಮುಂದೆ ಬರಬೇಕು. ಅದಕ್ಕಾಗಿಯೇ ವೈಚಾರಿಕ ಭಿನ್ನಾಭಿಪ್ರಾಯಗಳು ಏನಿದ್ದರೂ ಅದನ್ನು ಬದಿಗಿಟ್ಟು ಸಮಾಜಕ್ಕಾಗಿ ಬೇಕಾಗಿರುವ ಒಳ್ಳೆಯ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ನಾನು ರಾಜಕೀಯ ಕ್ಷೇತ್ರಕ್ಕೆ ಹೊಸಬನಾಗಿದ್ದೇನೆ. ಇಲ್ಲಿಗೆ ಬರುವಾಗ ಅನೇಕ ಅಗ್ನಿಪರೀಕ್ಷೆಗಳನ್ನು ಎದುರಿಸಬೇಕು. ಈಗಷ್ಟೇ ರಾಜಕೀಯಕ್ಕೆ ಬಂದಿರುವ ನಾನು ಇನ್ನೂ ಯುವಕ. ಇಂತಹ ಸಂದರ್ಭದಲ್ಲಿ ವಿರೋಧಿಗಳು ಹುಟ್ಟಿಕೊಳ್ಳುವುದು ಸಹಜ. ನಮ್ಮ ಮುಖಂಡರಾದ ಮೋದಿ, ಅಮಿತ್ ಶಾರನ್ನು ಜೈಲಿಗಟ್ಟುವ ಪ್ರಯತ್ನಗಳು ನಡೆದಿದ್ದರೂ, ಅವರು ಈ ಮಟ್ಟಕ್ಕೆ ಬೆಳೆದಿದ್ದಾರೆ. ನಾನು ಅದೇ ರೀತಿ ಬೆಳೆಯುತ್ತೇನೆ ಎಂಬ ನಂಬಿಕೆಯಿದೆ ಎಂದು ಪ್ರತಿಕ್ರಿಯಿಸಿದ್ದಾರೆ.





