ಜಲಸಂರಕ್ಷಣೆ ಸಾಮಾಜಿಕ ಧರ್ಮ: ಶ್ರೀ ಈಶಪ್ರಿಯ ತೀರ್ಥ
ಪಿಪಿಸಿಯಲ್ಲಿ ಹನಿಧ್ವನಿ ಕಾರ್ಯಕ್ರಮ

ಉಡುಪಿ, ಮಾ.28: ಈಗಿನ ಕಾಲಘಟ್ಟದಲ್ಲಿ ಜಲಸಂರಕ್ಷಣೆಗೆ ಸಮಾಜ ಹೆಚ್ಚಿನ ಆದ್ಯತೆ ನೀಡಬೇಕು. ಮಹಾಭಾರತದಲ್ಲಿ ಉಲ್ಲೇಖಿಸಿದಂತೆ ಎಲ್ಲರೂ ಜೀವಿಸು ವಂತೆ ಅನುಕೂಲ ಕಲ್ಪಿಸುವುದು ಸಾಮಾಜಿಕ ಧರ್ಮವಾಗಿದೆ ಎಂದು ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ, ಅದಮಾರು ಮಠದ ಕಿರಿಯ ಯತಿ ಗಳಾದ ಶ್ರೀಈಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗ ಮತ್ತು ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ನಡೆದ ಹನಿಧ್ವನಿ ಹಾಗೂ ಜಲಸಂರಕ್ಷಣೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಕಾಡು ಕಡಿದ ಪರಿಣಾಮ ಹವಾಮಾನ ವೈಪರೀತ್ಯಗಳು ಸಂಭವಿಸುತ್ತಿವೆ. ಬೀಳುವ ಮಳೆಯೂ ಭೂಗರ್ಭ ಸೇರದಂತೆ ನಗರೀಕರಣ ಬೆಳೆಯುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಮುಂದಿನ ತಲೆಮಾರಿಗೆ ನೀರು ದೊರಕಿಸಿ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ನೀರು ಮತ್ತು ಆಹಾರದ ವಿಷಯದಲ್ಲಿ ಮನುಷ್ಯ ಸ್ವಾವಲಂಬಿ ಯಾಗಬೇಕಾದ ಅಗತ್ಯವಿದೆ. ಪ್ರಕೃತಿ ಏನನ್ನು ನೀಡುತ್ತಿದೆಯೋ ಅದನ್ನು ಸದ್ಬಕೆ ಮಾಡಿಕೊಳ್ಳಬೇಕಾಗಿದೆ ಎಂದರು.
ಜಲತಜ್ಞ ಹಾಗೂ ಸಂಪನ್ಮೂಲ ವ್ಯಕ್ತಿ ಜೋಸೆಫ್ ಜಿಎಂ ರೆಬೆಲ್ಲೋ ಮಾತನಾಡಿ, ನಳ್ಳಿ ಹಾಗೂ ಬೋರ್‌ವೆಲ್ ಮೂಲಕ ನೀರು ಪಡೆಯುವುದು ಜಲಕ್ಷಾಮದ ಸಂಕೇತ. ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ವಿಪರೀತ ಬಳಕೆಯಿಂದ ಜಲಮೂಲಗಳು ಬತ್ತುತ್ತಿವೆ. ಭೂಮಿಯಲ್ಲಿ ಶುದ್ಧ ನೀರು ದುರ್ಲಭವಾಗುತ್ತಿದ್ದು, ಅನೇಕ ಮಾರಣಾಂತಿಕ ರೋಗಗಳಿಗೆ ಅಶುದ್ಧ ನೀರು ಕಾರಣವಾಗುತ್ತಿದೆ. ನೀರು ಇಂಗಿಸುವ ಕಾರ್ಯ ವ್ಯಾಪಕವಾಗಿ ನಡೆಯಬೇಕಾಗಿದ್ದು, ವಿದ್ಯಾರ್ಥಿಗಳು, ಸಂಘಸಂಸ್ಥೆಗಳು, ಸರಕಾರ ಜಲಸಂರಕ್ಷಣೆಯ ಜವಾಬ್ದಾರಿಹೊರಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಜಗದೀಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು. ಕನ್ನಡ ವಿಭಾಗ ಮುಖ್ಯಸ್ಥ ಡಾ. ಶ್ರೀಕಾಂತ ರಾವ್ ಸ್ವಾಗತಿಸಿ, ಮಂಜುನಾಥ ಕರಬ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಶಿವಕುಮಾರ್ ಅಳಗೋಡು ವಂದಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಜಗದೀಶ ಶೆಟ್ಟಿ ನ್ನಡವಿಾಗ ಮುಖ್ಯಸ್ಥ ಡಾ. ಶ್ರೀಕಾಂತ ರಾವ್ ಸ್ವಾಗತಿಸಿ, ಮಂಜುನಾಥ ಕರಬ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಶಿವಕುಮಾರ್ ಅಳಗೋಡು ವಂದಿಸಿದರು.







