ನೀತಿ ಸಂಹಿತೆ ಉಲ್ಲಂಘನೆ: ಅಬಕಾರಿ ಇಲಾಖೆಯಿಂದ 196 ಪ್ರಕರಣ ದಾಖಲು
ಮಂಡ್ಯ, ಮಾ.28: ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾ.10 ರಿಂದ 26ರವರೆಗೆ ಜಿಲ್ಲೆಯ ವಿವಿಧೆಡೆ 490 ಕಡೆ ದಾಳಿ ನಡೆಸಿ, 39 ಘೋರ, 115, 15(ಎ) ಮತ್ತು 42 ಸನ್ನದು ಷರತ್ತು ಉಲ್ಲಂಘನೆ ಪ್ರಕರಣಗಳು, ಒಟ್ಟಾರೆಯಾಗಿ 196 ಪ್ರಕರಣಗಳನ್ನು ದಾಖಲಿಸಿಲಾಗಿದೆ.
8212 ಲೀ. ಅಕ್ರಮ ಮದ್ಯ ಮತ್ತು 40.830 ಲೀ. ಬಿಯರ್ ಅನ್ನು ಜಪ್ತಿ ಮಾಡಿ, 27 ದ್ವಿಚಕ್ರ ವಾಹನ ಮತ್ತು ಒಂದು ಮೊಬೈಲ್ ವಶಪಡಿಸಿಕೊಂಡಿದ್ದು, 140 ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಅಂದಾಜು ಮೌಲ್ಯ 37,44,446 ರೂ.ಗಳಾಗಿದೆ ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.
Next Story





