ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಬೆಂಕಿ

ಆನೇಕಲ್,ಮಾ.28: ಅಪರೂಪದ ಸಾವಿರಾರು ಜೀವ ಸಂಕುಲವಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಿಟ್ಟೆ ಪಾರ್ಕ್, ಜಿರಾಫೆ ಆವರಣದ ಪಕ್ಕದ ಕಾಂಪೌಂಡಿನ ಬಳಿ ಬೆಂಕಿ ಬಿದ್ದು ಅಪಾರ ನಷ್ಟವಾಗಿದೆ.
ಇಂದು ಸಂಜೆ ವೇಳೆ ನಿಷೇಧಿತ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಉದ್ಯಾನದ ಆರಂಭದಲ್ಲೇ ಬೆಂಕಿ ಬಿದ್ದಿರುವುದರಿಂದ ಕೂಡಲೇ ಬೆಂಕಿ ನಂದಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಉದ್ಯಾನಾಧಿಕಾರಿಗಳು ಅಗ್ನಿಶಾಮಕದಳವನ್ನು ಶೀಘ್ರವೇ ಕರೆಸಿದ್ದು, ಸಾರ್ವಜನಿಕರ ಸಹಕಾರದಿಂದ ಉದ್ಯಾನದ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.
Next Story





