ಪಾಕ್ ವಿರುದ್ಧ ಆಸೀಸ್‌ಗೆ ಸರಣಿ ಜಯ

ಅಬುಧಾಬಿ, ಮಾ.28: ದಾಖಲೆ ಶತಕವನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಆ್ಯರೊನ್ ಫಿಂಚ್ ಹಾಗೂ ಆ್ಯಡಮ್ ಝಾಂಪ ಗಳಿಸಿದ 4 ವಿಕೆಟ್‌ಗಳ ಗೊಂಚಲು ನೆರವಿನಿಂದ ಆಸ್ಟ್ರೇಲಿಯ ತಂಡ ಪಾಕಿಸ್ತಾನವನ್ನು ಇಲ್ಲಿ ಬುಧವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ 80 ರನ್‌ಗಳಿಂದ ಮಣಿಸಿದೆ. ಆ ಮೂಲಕ 5 ಪಂದ್ಯಗಳ ಏಕದಿನ ಸರಣಿಯಲ್ಲಿ 3-0ಯಿಂದ ಮುನ್ನಡೆ ಸಾಧಿಸಿ ಸರಣಿಯನ್ನು ವಶಕ್ಕೆ ತೆಗೆದುಕೊಂಡಿದೆ.
ನಿಧಾನಗತಿಯ ಶೇಕ್ ಝಾಯೇದ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ ತಂಡ ಆ್ಯರೊನ್ ಫಿಂಚ್ (90, 136 ಎಸೆತ) ನೆರವಿನಿಂದ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿತು. ಆ ಬಳಿಕ ಝಾಂಪ (43ಕ್ಕೆ 4) ಹಾಗೂ ಪ್ಯಾಟ್ ಕಮಿನ್ಸ್ (23ಕ್ಕೆ 3) ಅವರ ಭರ್ಜರಿ ಬೌಲಿಂಗ್ ಬಲದಿಂದ ಪಾಕಿಸ್ತಾನವನ್ನು 44.4 ಓವರ್‌ಗಳಲ್ಲಿ 186 ರನ್‌ಗೆ ಆಲೌಟ್ ಮಾಡಿದ ಕಾಂಗರೂ ಪಡೆ ಗೆಲುವಿನ ನಗೆ ಬೀರಿತು.
ಮೊದಲೆರಡು ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದ ಕಮಿನ್ಸ್ ಅವರು ಈ ಪಂದ್ಯದಲ್ಲಿ ಪಾಕಿಸ್ತಾನದ ಶಾನ್ ಮಸೂದ್‌ರನ್ನು (2) ತನ್ನ ಮೂರನೇ ಓವರ್‌ನಲ್ಲಿ ಹಾಗೂ ಹಾರಿಸ್ ಸೊಹೈಲ್(1), ಮುಹಮ್ಮದ್ ರಿಝ್ವಾನ್‌ರನ್ನು (0) ತಮ್ಮ ನಾಲ್ಕನೇ ಓವರ್‌ನಲ್ಲಿ ಔಟ್ ಮಾಡಿದರು. ಇಮಾಮ್‌ವುಲ್ ಹಕ್ (46) ಹಾಗೂ ಶುಐಬ್ ಮಲಿಕ್ (32) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 59 ರನ್ ಸೇರಿಸಿ ಚೇತರಿಕೆ ನೀಡಿದರು. ಉಮರ್ ಅಕ್ಮಲ್ (36) ಹಾಗೂ ಇಮಾದ್ ವಸೀಂ (43) ಪಾಕ್ ಪರ ಉತ್ತಮ ಆಟವಾಡಿದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯ ತಂಡದ ಫಿಂಚ್‌ಗೆ ಸತತ ಏಕದಿನ ಪಂದ್ಯಗಳಲ್ಲಿ 3 ಶತಕ ಬಾರಿಸಿದ ಮೊದಲ ಆಸೀಸ್ ದಾಂಡಿಗ ಎನಿಸಿಕೊಳ್ಳುವ ಅವಕಾಶವಿತ್ತು. ಆದರೆ 90 ರನ್‌ಗೆ ಅವರು ಔಟ್ ಆದರು. ಮ್ಯಾಕ್ಸ್‌ವೆಲ್ (71), ಪೀಟರ್ ಹ್ಯಾಂಡ್ಸ್‌ಕಾಂಬ್ (47) ಹಾಗೂ ಅಲೆಕ್ಸ್ ಕಾರೆ (25) ಆಸೀಸ್ ಪರ ಉತ್ತಮ ಬ್ಯಾಟಿಂಗ್ ನಡೆಸಿದರು.
ಪಾಕ್ ತಂಡದ ಪರ ಇಮಾದ್ ವಸೀಂ (35ಕ್ಕೆ 1) ಬೌಲಿಂಗ್‌ನಲ್ಲ್ಲೂ ಮಿಂಚಿದರು.







