ಹನೂರು: ಪೊನ್ನಾಚಿ, ಗೋಪಿನಾಥಂ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ

ಹನೂರು: ಪೊನ್ನಾಚಿ ಹಾಗೂ ಗೋಪಿನಾಥಂ ಅರಣ್ಯ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಬೆಂಕಿಯ ನರ್ತನಕ್ಕೆ ಸುಮಾರು ಐವತ್ತಕ್ಕೂ ಹೆಚ್ಚು ಎಕ್ಕರೆ ಅರಣ್ಯ ಸುಟ್ಟು ಭಸ್ಮವಾಗಿದೆ.
ಕಳೆದ ಎರಡು ದಿನಗಳ ಹಿಂದೆ ತಮಿಳುನಾಡಿನ ಅರಣ್ಯ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಬೆಂಕಿ ಗೋಪೀನಾಥಂ ಅರಣ್ಯ ಸೇರಿದಂತೆ ಕಾವೇರಿ ನದಿ ವ್ಯಾಪ್ತಿಯಲ್ಲಿ ಹಾಗೂ ಪೊನ್ನಾಚಿ ಅರಣ್ಯ ವಲಯದ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಾಕಷ್ಟು ಪ್ರಯತ್ನ ಮಾಡಿದರು ಇನ್ನೂ ಬೆಂಕಿ ಆರಿಸಲು ಆಗುತ್ತಿಲ್ಲ ಎಂಬುದಾಗಿ ತಿಳಿದುಬಂದಿದೆ.
ಕಾವೇರಿ ನದಿ ಮೂಲದ ವ್ಯಾಪ್ತಿಯಲ್ಲಿ ಬರುವ ಬಹುತೇಕ ಬೆಟ್ಟ ಗುಡ್ಡಗಳ ಪ್ರದೇಶಗಳಿಂದ ಕೂಡಿರುವ ಹೆಚ್ಚಿನ ಮರ ಸಂಪತ್ತುಗಳನ್ನು ಹೊಂದಿದೆ ಹಾಗೂ ಈ ಭಾಗದಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿ ಇರುವುದು ಮತ್ತು ಜಿಂಕೆ ಸಾರಂಗ ನವಿಲುಗಳು ಕಾಡೆಮ್ಮೆಯಂತಹ ದೊಡ್ಡ ದೊಡ್ಡ ಪ್ರಾಣಿ ಪಕ್ಷಿಗಳು ಕಂಡು ಬರುತ್ತದೆ ಇದೀಗ ಬೆಂಕಿ ಕಾಣಿಸಿಕೊಂಡು ಪ್ರಾಣಿ ಪಕ್ಷಿಗಳು ದಿಕ್ಕೆಟ್ಟು ಓಡುವಂತಾಗಿದೆ.

Next Story







