ಸಂಚಾರ ನಿಯಮ ಉಲ್ಲಂಘನೆ: 182 ಪ್ರಕರಣ ದಾಖಲು
ಮಂಗಳೂರು, ಮಾ. 29: ನಗರದಲ್ಲಿ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದ ಬಸ್‌ಗಳ ವಿರುದ್ಧ ವಿಶೇಷ ಕಾರ್ಯಚರಣೆ ನಡೆಸಿದ ಪೊಲೀಸರು 182 ಪ್ರಕರಣ ದಾಖಲಿಸಿ 18,800 ರೂ. ದಂಡ ವಸೂಲಿ ಮಾಡಿದ್ದಾರೆ.
ಇವುಗಳಲ್ಲಿ ಕರ್ಕಶ ಹಾರ್ನ್ 48, ಎಲ್ಲೆಂದರಲ್ಲಿ ಬಸ್ಸನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುವ 15, ಟಿಕೆಟ್ ನೀಡದ ಕುರಿತು 47, ಸಮವಸ ಧರಿಸದೆ ಬಸ್ ಚಲಾವಣೆ 16 ಹಾಗೂ ಇತರ 56 ಪ್ರಕರಣ ದಾಖಲಿಸಲಾಗಿದೆ.
Next Story





