‘ಮೈ ಭೀ ಚೌಕಿದಾರ್ ಹೂಂ’ ವೀಡಿಯೊ ಶೇರಿಂಗ್: ಚು.ಆಯೋಗದ ನೋಟಿಸ್‌ಗೆ ಉತ್ತರಿಸಲು 10 ದಿನಗಳ ಕಾಲಾವಕಾಶ ಕೋರಿದ ಬಿಜೆಪಿ

ಹೊಸದಿಲ್ಲಿ, ಮಾ.29: ಚುನಾವಣಾ ಆಯೋಗದ ನಿರ್ದೇಶಗಳನ್ನು ಉಲ್ಲಂಘಿಸಿ ‘ಮೈ ಭೀ ಚೌಕಿದಾರ್ ಹೂಂ’ ಶೀರ್ಷಿಕೆಯ ವೀಡಿಯೊ ಜಾಹೀರಾತನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಕ್ಕಾಗಿ ಮಾ.26ರಂದು ತನ್ನ ರಾಷ್ಟ್ರೀಯ ಚುನಾವಣಾ ಸಮಿತಿಯ ಸದಸ್ಯ ನೀರಜ್‌ಗೆ ಜಾರಿಗೊಳಿಸಿರುವ ಶೋಕಾಸ್ ನೋಟಿಸ್‌ಗೆ ಉತ್ತರಿಸಲು ಬಿಜೆಪಿಯು ಇನ್ನೂ 10 ದಿನಗಳ ಕಾಲಾವಕಾಶವನ್ನು ಕೋರಿದೆ.
ದಿಲ್ಲಿಯ ಮುಖ್ಯ ಚುನಾವಣಾಧಿಕಾರಿಗಳು ಶುಕ್ರವಾರ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು. ಚುನಾವಣಾ ಆಯೋಗವು ಮೂರು ದಿನಗಳಲ್ಲಿ ಉತ್ತರಿಸುವಂತೆ ತನ್ನ ಶೋಕಾಸ್ ನೋಟಿಸ್‌ನಲ್ಲಿ ತಿಳಿಸಿತ್ತು.
Next Story





