ಜಪಾನ್: 6 ಲಕ್ಷ ಹಿರಿಯರಿಂದ ಏಕಾಂಗಿ ಜೀವನ

ಮಾ. 29: ಜಪಾನ್‌ನಲ್ಲಿ 40 ವರ್ಷಕ್ಕಿಂತ ಹೆಚ್ಚು ಪ್ರಾಯದ 6 ಲಕ್ಷಕ್ಕೂ ಅಕ ಮಂದಿ ಸಮಾಜದಿಂದ ಬೇರೆಯಾಗಿ ಸಂಪೂರ್ಣ ಏಕಾಂಗಿ ಜೀವನ ನಡೆಸುತ್ತಿದ್ದಾರೆ.
ಈ ಜನರು 6 ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚಿನ ಅವಗೆ ಯಾವುದೇ ಸಾಮಾಜಿಕ ಒಡನಾಟವಿಲ್ಲದೆ ಮನೆಯಲ್ಲೇ ಇರುತ್ತಾರೆ ಎಂದು ಸರಕಾರ ಸಂಗ್ರಹಿಸಿದ ಅಂಕಿಅಂಶಗಳು ಹೇಳಿವೆ.
ಈ ಪ್ರವೃತ್ತಿ ಜಪಾನ್‌ನಲ್ಲಿ ಎಷ್ಟು ವ್ಯಾಪಕವಾಗಿ ಹಬ್ಬಿದೆಯೆಂದರೆ, ಅದಕ್ಕೊಂದು ಹೆಸರನ್ನೂ ನೀಡಲಾಗಿದೆ- ಹಿಕಿಕೊಮೊರಿ. ಜನರು ಆರು ತಿಂಗಳ ಕಾಲ ಶಾಲೆ ಅಥವಾ ಕೆಲಸಕ್ಕೆ ಹೋಗದಿದ್ದರೆ ಹಾಗೂ ಈ ಅವಯಲ್ಲಿ ಕುಟುಂಬ ಸದಸ್ಯರನ್ನು ಹೊರತುಪಡಿಸಿ ಇತರರೊಂದಿಗೆ ಒಟನಾಟ ಹೊಂದಿಲ್ಲದಿದ್ದರೆ ಅವರು ‘ಹಿಕಿಕೊಮೊರಿ’ಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
40 ಮತ್ತು 64 ವರ್ಷಗಳ ನಡುವಿನ 6,13,000 ಹಿಕಿಕೊಮೊರಿಗಳು ಜಪಾನ್‌ನಲ್ಲಿದ್ದಾರೆ ಎಂದು ಶುಕ್ರವಾರ ಪ್ರಕಟಗೊಂಡ ಸರಕಾರಿ ಸಮೀಕ್ಷೆಯೊಂದು ತಿಳಿಸಿದೆ. ಈ ಪೈಕಿ ಮುಕ್ಕಾಲು ಭಾಗ ಪುರುಷರು.
ಇತ್ತೀಚಿನವರೆಗೂ ಈ ಪ್ರವೃತ್ತಿಯು ಹದಿಹರೆಯದವರು ಮತ್ತು 20 ಮತ್ತು 30 ವರ್ಷಗಳ ನಡುವಿನವರಿಗೆ ಸಂಬಂಸಿದ್ದಾಗಿದೆ ಎಂಬುದಾಗಿ ತಿಳಿಯಲಾಗಿತ್ತು. ಆದರೆ, ಊಹಿಸಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಈ ಪ್ರವೃತ್ತಿಯನ್ನು ಅನುಸರಿಸುತ್ತಿರುವ ಹಿರಿಯ ಜನರಿರುವುದು ಈಗ ಪತ್ತೆಯಾಗಿದೆ.







