ಉಡುಪಿ: ಮುಸ್ಲಿಮ್ ವೆಲ್ಫೇರ್ ಅಧ್ಯಕ್ಷರಾಗಿ ವಿ.ಎಸ್.ಉಮರ್

ವಿ.ಎಸ್.ಉಮರ್
ಉಡುಪಿ, ಮಾ.30: ಉಡುಪಿ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಇದರ 35ನೆ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಕಲ್ಯಾಣಪುರ ಅಬ್ದುಲ್ ಗಫೂರ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.
ಈ ಸಂದರ್ಭದಲ್ಲಿ 2019-20ನೆ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ವಿ.ಎಸ್.ಉಮರ್, ಉಪಾಧ್ಯಕ್ಷರಾಗಿ ಸಲಾವುದ್ದೀನ್ ಸಾಹೇಬ್, ಕಾರ್ಯದರ್ಶಿಯಾಗಿ ಪಿ.ಖಲೀಲ್ ಅಹಮದ್, ಜೊತೆ ಕಾರ್ಯದರ್ಶಿಯಾಗಿ ಕೆ.ಅಬ್ದುಲ್ ಗಫೂರ್, ಖಜಾಂಜಿಯಾಗಿ ಮುನೀರ್ ಮುಹಮ್ಮದ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಲ್ಯಾಣಪುರ ಅಬ್ದುಲ್ ಗಫೂರ್, ರಿಯಾಝ್ ಅಹ್ಮದ್, ಮುಹಮ್ಮದ್ ಫಯಾಝ್, ಯು. ಇಬ್ರಾಹಿಂ, ಝಾಕೀರ್ ಹುಸೈನ್, ಎಸ್.ಎ. ಶಮೀಮ್, ಯಾಸರ್ ಅಕ್ರಂ, ಖಾಲಿದ್ ಅಝೀಝ್ ಅವರನ್ನು ಆಯ್ಕೆ ಮಾಡಲಾಯಿತು.
Next Story





