ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಎಸ್‌ಯುಸಿಐ ಅಭ್ಯರ್ಥಿಯಿಂದ ಪ್ರಚಾರ

ಬೆಂಗಳೂರು, ಮಾ. 30: ಕಟ್ಟಡ ಕಾರ್ಮಿಕರು, ಗಾರ್ಮೆಂಟ್ಸ್, ಆಶಾ, ಅಂಗನವಾಡಿ ಹಾಗೂ ಇತರ ಎಲ್ಲ ವರ್ಗದ ದುಡಿಯುವ ಜನರಿಗೆ ಮಾಸಿಕ ಕನಿಷ್ಠ 21 ಸಾವಿರ ರೂ.ವೇತನ ಖಾತ್ರಿಪಡಿಸಲು, ಕಾರ್ಮಿಕರ ದನಿಯಾಗಿರುವ ನನಗೆ ಮತ ನೀಡಿ ಎಂದು ಎಸ್‌ಯುಸಿಐ ಅಭ್ಯರ್ಥಿ ಟಿ.ಸಿ.ರಮಾ ಮನವಿ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತದಲ್ಲಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರಮಾ ತಮ್ಮ ಬೆಂಬಲಿಗರೊಂದಿಗೆ ಶನಿವಾರ ಇಲ್ಲಿನ ಯಶವಂತಪುರದಲ್ಲಿ ಪ್ರಚಾರ ನಡೆಸಿದ ಅವರು, ರೈತರ ಫಸಲುಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಲು ನನ್ನನ್ನು ಬೆಂಬಲಿಸಿ ಎಂದು ಕೋರಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಂತೆ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲು ಹಾಗೂ ಜನಧ್ವನಿಯನ್ನು ಸಂಸತ್ತಿನಲ್ಲಿ ಎತ್ತಿಹಿಡಿಯಲು ಎಸ್‌ಯುಸಿಐ ಪಕ್ಷವನ್ನು ಬೆಂಬಲಿಸಬೇಕು ಎಂದು ಟಿ.ಸಿ.ರಮಾ ಅವರು ಮತದಾರರಲ್ಲಿ ಮನವಿ ಮಾಡಿದರು.
Next Story





