ರಸ್ತೆ ಬದಿ ನಿಂತಿದ್ದ ಮಹಿಳೆಯಿಂದ 13 ಲಕ್ಷ ನಗದು ದರೋಡೆ
ಬೆಂಗಳೂರು, ಮಾ.30: ವೈದ್ಯಕೀಯ ಸೀಟಿಗಾಗಿ ಪರಿಚಯಸ್ಥರಿಗೆ ಹಣ ಕೊಡುವ ಸಲುವಾಗಿ 13 ಲಕ್ಷ ಹಣದೊಂದಿಗೆ ಮಹಿಳೆ ನಿಂತಿದ್ದ ವೇಳೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹಣವಿದ್ದ ಬ್ಯಾಗನ್ನು ಕಸಿದು ಪರಾರಿಯಾಗಿರುವ ಘಟನೆ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರೇವತಿ ಎಂಬುವರು ಪರಿಚಯಸ್ಥರೊಬ್ಬರ ಸಹೋದರಿಗೆ ಮೆಡಿಕಲ್ ಸೀಟು ಕೊಡಿಸುವ ಸಲುವಾಗಿ 13 ಲಕ್ಷ ಹಣ ತೆಗೆದುಕೊಂಡು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಬಳಿ ಪರಿಚಯಸ್ಥರಿಗಾಗಿ ಕಾಯುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ದರೋಡೆಕೋರರು ಹಣವಿದ್ದ ಬ್ಯಾಗನ್ನು ಇವರ ಕೈಯಿಂದ ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ರೇವತಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ.
Next Story