ಸುಮಲತಾ ಆರೋಪ ಸತ್ಯಕ್ಕೆ ದೂರ: ನಿಖಿಲ್ ಸ್ಪಷ್ಟನೆ

ಮಂಡ್ಯ, ಮಾ.30: ತನ್ನ ನಾಮಪತ್ರ ಲೋಪದೋಷ ಸರಿಪಡಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಮನೆಗೆ ಡಿಸಿ ಹೋಗಿದ್ದರು ಎಂಬ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದ್ದು ಎಂದು ಜೆಡಿಎಸ್ ಅಭ್ಯರ್ಥಿ ನಿಖಿಲ್ ಸ್ಪಷ್ಟಪಡಿಸಿದ್ದಾರೆ.
ಮದ್ದೂರು ತಾಲೂಕಿನಲ್ಲಿ ಶನಿವಾರ ಪ್ರಚಾರ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಸಾಕ್ಷಿಗಳಿದ್ದರೆ ಕೊಡಲಿ, ಆರೋಪ, ಟೀಕೆಗಳಿಂದ ಕುಗ್ಗಿಸುತ್ತೇನೆಂದು ಅಂದುಕೊಂಡಿದ್ದರೆ ಅದು ಅವರ ಭ್ರಮೆ ಎಂದು ವ್ಯಂಗ್ಯವಾಡಿದರು.
ನನ್ನ ಪರವಾಗಿ ನಿಂತ ಜಿಲ್ಲೆಯ ಜನರನ್ನು ನಂಬಿ ಸ್ಪರ್ಧಿಸಿದ್ದೇನೆ. ತಂದೆ, ತಾತನಿಗೆ ನೀಡಿದ ಸ್ಥಾನ ಮಂಡ್ಯ ಜನ ನನಗೂ ನೀಡುವ ನಂಬಿಕೆಯಿದೆ. ಸುಮಲತಾ ಅವರಿಗೆ ಕ್ರಮ ಸಂಖ್ಯೆ ನೀಡುವ ವಿಷಯದಲ್ಲಿ ಯಾವ ಪ್ರಭಾವ ಬೀರಿಲ್ಲ. ದರ್ಶನ್, ಯಶ್ ಪ್ರಚಾರಕ್ಕೆ ಬಂದರೆ ಒಳ್ಳೆಯದು ಎಂದು ಅವರು ಹೇಳಿದರು.
Next Story





