ಎ.1ರಿಂದ ಜೋಕಟ್ಟೆಯಲ್ಲಿ ಧಾರ್ಮಿಕ ಕಾರ್ಯಕ್ರಮ
ಮಂಗಳೂರು, ಮಾ. 30: ಜೋಕಟ್ಟೆಯ ಮುಹಿಯ್ಯುದ್ದೀನ್ ಹೊಸ ಜುಮಾ ಮಸೀದಿ ಮತ್ತು ನೂರಾನಿಯಾ ಜಮಾತ್ ಕಮಿಟಿಯ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುವ ಸ್ವಲಾತ್ ಮಜ್ಲಿಸ್, ಮತ ಪ್ರವಚನ ಕಾರ್ಯಕ್ರಮವು ಎಪ್ರಿಲ್ 1ರಿಂದ 4ರವರೆಗೆ ನಡೆಯಲಿದೆ.
ಎ.1ರಂದು ಮಸೀದಿಯ ಅಧ್ಯಕ್ಷ ಹಾಜಿ ಅಬ್ದುರ್ರಹ್ಮಾನ್ ನಾರ್ವೆಯ ಅಧ್ಯಕ್ಷತೆಯಲ್ಲಿ ಮಸೀದಿಯ ಮುದರ್ರಿಸ್ ಹಾಜಿ ಇ.ಎಂ. ಅಬ್ದುರ್ರಹ್ಮಾನ್ ದಾರಿಮಿ ಅಲ್ ಹಾಮಿದಿ ಕಾರ್ಯಕ್ರಮ ಉ್ಘಾಟಿಸಲಿದ್ದು, ಕೆ.ಎಚ್.ಉಸ್ಮಾನ್ ಮುಸ್ಲಿಯಾರ್ ಪ್ರವಚನ ನೀಡುವರು.
ಎ.2ರಂದು ಉಮರುಲ್ ಫಾರೂಕ್ ಸಖಾಫಿ, ಎ.3ರಂದು ಅನ್ಸಾರ್ ಫೈಝಿ ಪ್ರವಚನ ನೀಡಲಿದ್ದಾರೆ. ಎ.4ರಂದು ಅಸೈಯದ್ ಅಲಿಯಾರ್ ತಂಙಳ್ ಅಲ್ ಬುಖಾರಿಯ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





