Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕುಮಟಾ: ಹಿರಿಯ ಕವಿ, ಸಾಹಿತಿ ಡಾ. ಬಿ.ಎ....

ಕುಮಟಾ: ಹಿರಿಯ ಕವಿ, ಸಾಹಿತಿ ಡಾ. ಬಿ.ಎ. ಸನದಿ ನಿಧನ

ವಾರ್ತಾಭಾರತಿವಾರ್ತಾಭಾರತಿ31 March 2019 9:56 AM IST
share
ಕುಮಟಾ: ಹಿರಿಯ ಕವಿ, ಸಾಹಿತಿ ಡಾ. ಬಿ.ಎ. ಸನದಿ ನಿಧನ

ಕುಮಟಾ, ಮಾ. 31: ಖ್ಯಾತ ಕವಿ, ಸಾಹಿತಿ ಡಾ. ಬಿ.ಎ.ಸನದಿ ಅವರು ಕುಮಟಾ ಹೆರವಟ್ಟಾದ ನಿವಾಸದಲ್ಲಿ ರವಿವಾರ ಬೆಳಗ್ಗೆ ಕೊನೆಯುಸಿರೆಳೆದರು. ಮೃತ ದೇಹವನ್ನು ಅವರ ಹುಟ್ಟೂರಾದ ಬೆಳಗಾವಿ ಸಿಂದೊಳ್ಳಿಗೆ ಕೊಂಡೊಯ್ಯಲು ಸಿದ್ಧತೆ ನಡೆದಿದೆ.

ಬಿ.ಎ.ಸನದಿ 1933ರ ಆ. 18 ರಂದು ಬೆಳಗಾವಿ ಜಿಲ್ಲೆಯ ಶಿಂದೊಳ್ಳಿ ಗ್ರಾಮದಲ್ಲಿ ಜನಿಸಿದ್ದರು.

ಕವಿ ಸನದಿ ಕುರಿತು

ಮನೆಯಲ್ಲಿ ‘ಬಾಬಾ ಸಾಹೇಬ ಅಹಮದ್ ಸಾಹೇಬ ಸನದಿ’ ಎಂಬ ಹೆಸರಿನ ಖ್ಯಾತ ಕವಿ, ಸಾಹಿತಿ ‘ಬಿ.ಎ ಸನದಿ’ ಒಳ್ಳೆಯ ವಾಗ್ಮಿ,, ಅನುವಾದಕಾರ, ಮಕ್ಕಳ ಸಾಹಿತ್ಯ, ನಾಟಕ ರಚನಾಕಾರ ಹಾಗೂ ನಿರ್ದೇಶಕರು.

ಅವರು ಮುಂಬೈ ಆಕಾಶವಾಣಿಯ ಹಿರಿಯ ಅಧಿಕಾರಿಯಾಗಿ ಪಾದಾರ್ಪಣೆ ಮಾಡಿದ ಕಾಲದಲ್ಲಿ ಕನ್ನಡ ರೇಡಿಯೋ ನಾಟಕಗಳು, ಉಪನ್ಯಾಸಗಳು ಸರಸ ಸಂಭಾಷಣೆಗಳು ಯಕ್ಷಗಾನ ಆಟಗಳು, ಕರ್ನಾಟಕದಿಂದ ಮುಂಬೈಗೆ ಆಗಮಿಸುತ್ತಿದ್ದ ಸುಪ್ರಸಿದ್ಧ ಕವಿಗಳ ಜೊತೆ ಸಂವಾದ ಸಂದರ್ಶನಗಳು ‘ಮುಂಬೈ ಆಕಾಶವಾಣಿ’ಯಲ್ಲಿ ತಪ್ಪದೆ ಆಯೋಜಿಸಲ್ಪಡುತ್ತಿದ್ದವು.

ಮಾಧ್ಯಮಿಕ ಶಿಕ್ಷಣ ವನ್ನು ಬೆಳಗಾವಿಯ ಜಿ.ಎ.ಹೈಸ್ಕೂಲ್ ಹಾಗು ಬಿ.ಎ. ವ್ಯಾಸಂಗವನ್ನು ಲಿಂಗರಾಜ ಕಾಲೇಜ್ ಕರ್ನಾಟಕ ವಿಶ್ವ ವಿದ್ಯಾಲಯ ಗಳಲ್ಲಿ ಪೂರೈಸಿದ ಸನದಿಯವರು ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪದವಿ ಪಡೆದು, ಬೆಡಕೀಹಾಳ್-ಶಮನೇವಾಡಿ ಹೊಸ ಹೈಸ್ಕೂಲಿನಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದ್ದರು.

ಇವರ ಸಾಹಿತ್ಯ

1949 ರಲ್ಲಿ, ಸನದಿಯವರ ಪ್ರಥಮ ಕವನ ಜಯ ಕರ್ನಾಟಕವು ನವಯುಗ ಪತ್ರಿಕೆಯಲ್ಲಿ ಪ್ರಕಟವಾಯಿತು. ಸನದಿಯವರು 16 ವರ್ಷದವರಿದ್ದಾಗ ಅವರು ರಚಿಸಿದ, ಪತಿವ್ರತಾ ಪ್ರಭಾವ ನಾಟಕ ವನ್ನು ಸಿಂದೊಳ್ಳಿ ಯಲ್ಲಿ ಪ್ರದರ್ಶನಗೊಂಡಿತು.

1955 ರಲ್ಲಿ ಶಮನೇವಾಡಿಯಲ್ಲಿ ಸ್ಥಳೀಯ ಐವರು ಕವಿಗಳನ್ನು ಸೇರಿಸಿಕೊಂಡು ಸ್ನೇಹ ಪ್ರಕಾಶನವನ್ನು ಪ್ರಾರಂಭಿಸಿ ಐದಳ ಮಲ್ಲಿಗೆ ಯನ್ನು ಪ್ರಕಟಿಸಿದರು. ಮುಂದೆ ಅದೇ ಪ್ರಕಾಶನದಿಂದ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಲ್ಲದೇ ಆ ಗಡಿಭಾಗದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಸಾರ ಕಾರ್ಯ ಮಾಡಿದರು.

1956 ರಲ್ಲಿ ದಿ.ಎಸ್.ಡಿ.ಇಂಚಲರ ಜೊತೆಗೂಡಿ ಚೇತನ ಪ್ರಕಾಶನವನ್ನು ಆರಂಭಿಸಿದರು. ಕರ್ನಾಟಕ ಏಕೀಕರಣ ದಿನೋತ್ಸವದ ಅಂಗವಾಗಿ ವಿಜಯ ದುಂದುಭಿ ಎಂಬ ಪ್ರಾತಿನಿಧಿನಿಕ ಕವನ ಸಂಕಲನವನ್ನು ಪ್ರಕಟಿಸಿದರು.

1962 ರಲ್ಲಿ ಬೆಳಗಾವಿಯ ವಿಕಾಸ ಪತ್ರಿಕೆಯ ಸಹಾಯಕ ಸಂಪಾದಕತ್ವ ನಿರ್ವಹಿಸಿದರು. 1965 ರಲ್ಲಿ ಕಲಬುರ್ಗಿ ಯಲ್ಲಿ ನೃಪತುಂಗ ಪ್ರಕಾಶನ ಆರಂಭಿಸಿದರು.

ಜಿಲ್ಲಾ ಮತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಟಿಗಳ ಉದ್ಘಾಟಕರಾಗಿ, ಅಧ್ಯಕ್ಷರಾಗಿ ಭಾಗವಹಿಸಿದ್ದರು. ಕೆನಡಾದ ಟೊರಾಂಟೋ ನಗರದ ಕನ್ನಡ ಸಂಘದ ಕವಿ ಸಮ್ಮೆಳನದ ಅಧ್ಯಕ್ಷತೆಯನ್ನೂ ವಹಿಸಿದ್ದರು.

2011ರ ಎಪ್ರಿಲ್ ಒಂದೇ ತಿಂಗಳಿನಲ್ಲಿ ಉತ್ತರ ಕನ್ನಡ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರಾಗಿದ್ದರು. ಯು.ಎ.ಇ ; ಸಿಂಗಾಪುರ ; ಮಲೇಶಿಯಾ, ಅಮೆರಿಕಾ ಮತ್ತು ಕೆನಡಾ ದೇಶಗಳಲ್ಲಿ ಸಂಚರಿಸಿ ಬಂದಿದ್ದಾರೆ.

ಪುರಸ್ಕಾರಗಳು

1962ರಲ್ಲಿ, ತಾಜ್ ಮಹಲ್ (ಕವನಸಂಗ್ರಹ)ಕ್ಕೆ, ರಾಜ್ಯ ಸರಕಾರದ ಪ್ರಶಸ್ತಿ, 1967ರಲ್ಲಿ, ಪ್ರತಿಬಿಂಬ (ಕವನ ಸಂಗ್ರಹ)ಕ್ಕೆ, ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, 1969ರಲ್ಲಿ, ಧ್ರುವಬಿಂದು (ಕವನ ಸಂಗ್ರಹ)ಕ್ಕೆ, ಭಾರತ ಸರಕಾರದ ಪ್ರಶಸ್ತಿ. 1984ರಲ್ಲಿ, ಇಲ್ಲಿ ಸಲ್ಲುವರು (ವಚನ ವಿಮರ್ಶೆ)ಗೆ, ಕಾವ್ಯಾನಂದ ಪುರಸ್ಕಾರ ಹಾಗು ಇಳಕಲ್ಲದ ಚಿತ್ತರಗಿ ಸಂಸ್ಥಾನ ಮಠದ ವೀರಶೈವ ಸಾಹಿತ್ಯ ಪ್ರಶಸ್ತಿ.

ಸಮಗ್ರ ಸಾಹಿತ್ಯಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಸನ್ಮಾನ ಹಾಗು ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ. ದೆಹಲಿ ಕನ್ನಡಿಗ ಪರವಾಗಿ ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ, ಡಾ . ಗೌರೀಶ ಕಾಯ್ಕಿಣಿಯವರಿಂದ ‘ಮಾನವ್ಯ ಕವಿ’ ಎಂದು ಬಿರುದಾಂಕಿತರಾದರು.

ಕರ್ನಾಟಕ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್, ಸಿರಿಗನ್ನಡ ಗೌರವ ಪ್ರಶಸ್ತಿ, ಸಾಧನ ಶಿಖರ ಪ್ರಶಸ್ತಿ ಹಾಗು ‘ಪಂಪ ಪ್ರಶಸ್ತಿ’ ಪಡೆದಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X