'ಬಿಜೆಪಿಗೆ ಮತ ನೀಡಬೇಡಿ' ಅಭಿಯಾನದಲ್ಲಿ ಕೈ ಜೋಡಿಸಿದ ಚಿತ್ರ ನಿರ್ದೇಶಕ ಪಾ.ರಂಜಿತ್

ಹೊಸದಿಲ್ಲಿ, ಮಾ.31: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡದಂತೆ ಮತದಾರರಲ್ಲಿ ಮನವಿ ಮಾಡಿರುವ ದೇಶದ 100 ಮಂದಿ ಚಿತ್ರ ನಿರ್ಮಾಪಕರ ಪಟ್ಟಿಯಲ್ಲಿ ಚಿತ್ರ ನಿರ್ದೇಶಕ ಪಾ.ರಂಜಿತ್ ಸೇರ್ಪಡೆಗೊಂಡಿದ್ದಾರೆ.
ಪ್ರಜಾಪ್ರಭುತ್ವವನ್ನು ಉಳಿಸಲು ಬಿಜೆಪಿಗೆ ವಿರುದ್ಧವಾಗಿ ಮತ ನೀಡುವಂತೆ ಚಿತ್ರ ನಿರ್ಮಾಪಕರು ಒತ್ತಾಯಿಸಿದ್ದಾರೆ.
ಚಿತ್ರ ನಿರ್ದೇಶಕ ವೆಟ್ರಿ ಮಾರನ್, ಆಶಿಕ್ ಅಬು, ಲೀನಾ ಮಣಿಮೆಕಾಲಾಯ್ , ಲಿಜೊ ಜೋಶ್ ಪೆಲ್ಲಿಸ್ಸೆರಿ ಮತ್ತು ರಾಜೀವ್ ರವಿ ಮತ್ತಿತರರು ಬಿಜೆಪಿ ವಿರುದ್ಧ ಚಿತ್ರ ನಿರ್ಮಾಪಕರು ದೇಶಾದ್ಯಂತ ಕೈಗೊಂಡಿರುವ ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ.
Next Story





