ಪುಲ್ವಾಮ ದಾಳಿ ಚುನಾವಣೆಗೆ ಮುನ್ನ ಬಿಜೆಪಿಗೆ 'ಜೈಶ್' ಕೊಟ್ಟ ಉಡುಗೊರೆ: ‘ರಾ’ ಮಾಜಿ ಮುಖ್ಯಸ್ಥ ದುಲಾತ್

ಹೊಸದಿಲ್ಲಿ, ಮಾ.31: ಪುಲ್ವಾಮದಲ್ಲಿ ಸಿಆರ್ ಪಿಎಫ್ ಸೈನಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಯು ಚುನಾವಣೆಯ ಮೊದಲು ಬಿಜೆಪಿಗೆ ಸಿಕ್ಕ ಉಡುಗೊರೆ ಎಂದು ‘ರಾ’ ಮಾಜಿ ಮುಖ್ಯಸ್ಥ ಎ.ಎಸ್. ದುಲಾತ್ ಹೇಳಿದ್ದಾರೆ.
ಏಶಿಯನ್ ಅರಬ್ ಅವಾರ್ಡ್ಸ್ 2019 ಕಾರ್ಯಕ್ರಮದ ನಂತರ ಮಾತನಾಡಿದ ಅವರು, “ಲೋಕಸಭಾ ಚುನಾವಣೆಗೆ ಮೊದಲು ಬಿಜೆಪಿಗೆ ಸಿಕ್ಕ ಉಡುಗೊರೆಯಾಗಿದೆ ಪುಲ್ವಾಮ ದಾಳಿ ಮತ್ತು ಪಾಕಿಸ್ತಾನದಲ್ಲಿ ಉಗ್ರ ಶಿಬಿರಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ಸ್ ನಡೆಸಲು ಭಾರತಕ್ಕೆ ಹಕ್ಕಿತ್ತು. ನಾನು ಈ ಮೊದಲೂ ಹೇಳಿದ್ದೇನೆ. ಈಗಲೂ ಹೇಳುತ್ತಿದ್ದೇನೆ. ಪುಲ್ವಾಮ ದಾಳಿ ಜೈಶ್ ಮುಹಮ್ಮದ್ ಪ್ರಧಾನಿ ಮೋದಿಗೆ ನೀಡಿದ ಉಡುಗೊರೆ” ಎಂದವರು ಹೇಳಿದರು.
ರಾಷ್ಟ್ರೀಯತೆಯನ್ನು ವಿಶಾಲ ದೃಷ್ಟಿಕೋನದ ಮನಸ್ಥಿತಿಯಿಂದ ನೋಡಬೇಕು. ರಾಷ್ಟ್ರೀಯತೆಯು ಯುದ್ಧಕ್ಕೆ ಕಾರಣವಾಗಬಹುದು. ನಾವು ಕಾಶ್ಮೀರಿಗಳೊಂದಿಗೆ ಮಾತನಾಡಬೇಕು. ಅದೇ ಮುಂದಿನ ದಾರಿ” ಎಂದು ಹೇಳಿದರು.
Next Story





