ಟಿವಿ ಡಿಬೇಟ್ ಕಾರ್ಯಕ್ರಮದಲ್ಲಿ ರೈತನಿಗೆ ಶೂನಲ್ಲಿ ಥಳಿಸಲು ಮುಂದಾದ ಬಿಜೆಪಿ ನಾಯಕ
ವಿಡಿಯೋ ವೈರಲ್

ಹೊಸದಿಲ್ಲಿ, ಮಾ.31: ಬಿಜೆಪಿ ನಾಯಕನೊಬ್ಬ ರೈತ ಮುಖಂಡರೊಬ್ಬರಿಗೆ ಶೂನಲ್ಲಿ ಥಳಿಸಲು ಯತ್ನಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಶಹರಾನ್ಪುರದಲ್ಲಿ ಸ್ಥಳೀಯ ಸುದ್ದಿ ಚಾನೆಲೊಂದು ಹಮ್ಮಿಕೊಂಡಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿಜೇಂದ್ರ ಕಶ್ಯಪ್ ಪಾಲ್ಗೊಂಡಿದ್ದು, ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಸರಕಾರದ ಒತ್ತಡದಿಂದಾಗಿ ಸಕ್ಕರೆ ಕಾರ್ಖಾನೆಗಳು 60 ಶೇ. ಬಾಕಿಯನ್ನು ರೈತರಿಗೆ ನೀಡಿದೆ ಎಂದಿದ್ದರು.
ಆದರೆ ಬಿಜೆಪಿ ನಾಯಕನ ಈ ಹೇಳಿಕೆ ಸುಳ್ಳು ಎಂದು ಸ್ಥಳೀಯ ರೈತ ಮುಖಂಡ, ಭಾರತೀಯ ಕಿಸಾನ್ ಯುನಿಯನ್ ನಾಯಕ ಅರುಣ್ ರಾಣಾ ವಾದಿಸಿದರು. “ನನ್ನ ಬಳಿ ಸಕ್ಕರೆ ಇಲಾಖೆಯ ದಾಖಲೆಗಳಿವೆ. ಕಳೆದ 2 ವರ್ಷಗಳಲ್ಲಿ ಕೇವಲ 15 ಶೇ. ಕಬ್ಬು ಬೆಳೆಗಾರರ ಬಾಕಿ ಪಾವತಿ ಮಾಡಲಾಗಿದೆ” ಎಂದು ರಾಣಾ ಹೇಳಿದ್ದರು.
ಇದನ್ನು ಕೇಳಿದ ಕಶ್ಯಪ್ ಕೋಪಗೊಂಡು ತನ್ನ ಶೋ ತೆಗೆದು ರೈತ ಮುಖಂಡನ ಮೇಲೆ ಹಲ್ಲೆಗೆ ಯತ್ನಿಸಿದರು. ಕೂಡಲೇ ಸ್ಥಳದಲ್ಲಿದ್ದವರು ಅವರನ್ನು ತಡೆದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
A visibly angry Saharanpur BJP dist president Vijendra Kashyap tried to attack opposition with shoe during a TV show debate. People at the spot intervened to calm down Kashyap. pic.twitter.com/1VgeGhStVT
— Piyush Rai (@Benarasiyaa) March 28, 2019







