ಚುನಾವಣಾ ಆಯೋಗದಿಂದ ವೀಕ್ಷಕ ನೇಮಕ
ಬೆಂಗಳೂರು, ಮಾ.31: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಯಶವಂತಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಐ.ಎ.ಎಸ್ ಅಧಿಕಾರಿಯಾದ ಪಿ.ಎಸ್.ರೆಡ್ಡಿಯನ್ನು ಭಾರತ ಚುನಾವಣಾ ಆಯೋಗ ನೇಮಿಸಿದೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದ ಯಾವುದೇ ಅಹವಾಲು. ದೂರು ಹಾಗೂ ಮನವಿಗಳು ಇದ್ದಲ್ಲಿ ಸಾರ್ವಜನಿಕರು ನೇರವಾಗಿ ವೀಕ್ಷಕರ ಗಮನಕ್ಕೆ ತರಬಹುದು ಎಂದು ಸಹಾಯಕ ಚುನಾವಣಾಧಿಕಾರಿ ಎ.ಎಲ್.ವುಂಜುನಾಥ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರತಿದಿನ ಬೆಳಿಗ್ಗೆ 9 ರಿಂದ 10 ಗಂಟೆಯೊಳಗೆ ಕುಮಾರ ಕೃಪಾ ಅತಿಥಿಗೃಹ ಬೆಂಗಳೂರು ಇಲ್ಲಿ ಖುದ್ದಾಗಿ ಭೇಟಿಮಾಡಿ ಅಹವಾಲು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 93533 10817 ಅನ್ನು ಸಂಪರ್ಕಿಸಬಹುದು.
Next Story





