Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮನೆಯವರನ್ನು ಧಿಕ್ಕರಿಸಿ ಬರುವ ನಾವು...

ಮನೆಯವರನ್ನು ಧಿಕ್ಕರಿಸಿ ಬರುವ ನಾವು ಕೇಸು, ಪ್ರತಿಭಟನೆಗಷ್ಟೇ ಸೀಮಿತವೇ: ಬಜರಂಗದಳ ತೊರೆದ ಬಿಲ್ಲವ ಯುವಕನ ಪೋಸ್ಟ್

ರಿಪೋರ್ಟ್ ಮೂಲಕ ಕೆಲ ಗಂಟೆಗಳಲ್ಲಿ ಎಫ್ ಬಿ ಖಾತೆಯೇ ಡಿಲಿಟ್!

ವಾರ್ತಾಭಾರತಿವಾರ್ತಾಭಾರತಿ31 March 2019 7:47 PM IST
share
ಮನೆಯವರನ್ನು ಧಿಕ್ಕರಿಸಿ ಬರುವ ನಾವು ಕೇಸು, ಪ್ರತಿಭಟನೆಗಷ್ಟೇ ಸೀಮಿತವೇ: ಬಜರಂಗದಳ ತೊರೆದ ಬಿಲ್ಲವ ಯುವಕನ ಪೋಸ್ಟ್

ಬಜರಂಗದಳದಿಂದ ಹೊರಬಂದ ಯುವಕನೊಬ್ಬ ಫೇಸ್ ಬುಕ್ ನಲ್ಲಿ ಹಾಕಿರುವ ಪೋಸ್ಟ್ ಒಂದು ವೈರಲ್ ಆಗಿದೆ. ಈ ಹಿಂದೆ ಬಜರಂಗಳದ ಬಜಗೋಳಿ ವಲಯ ಸಂಚಾಲಕನಾಗಿದ್ದ ಅಕ್ಷತ್ ಸುವರ್ಣ ಎಂಬವರು ಬಜರಂಗದಳ ಬಗ್ಗೆ ತಾನು ಕಂಡುಕೊಂಡ ಸತ್ಯ ಮತ್ತು ಕಷ್ಟದ ಸಮಯದಲ್ಲಿ ನೆರವಾದವರ ಬಗ್ಗೆ ಫೇಸ್ ಬುಕ್ ಪೋಸ್ಟ್ ಮಾಡಿದ್ದರು. ಅದು ಕ್ಷಣದಲ್ಲೇ ವೈರಲ್ ಆಗಿತ್ತು. ಆದರೆ ಪೋಸ್ಟ್ ಹಾಕಿದ ಕೆಲ ಗಂಟೆಗಳಲ್ಲೇ ಅಕ್ಷತ್ ರ ಖಾತೆಯೇ ಡಿಲಿಟ್ ಆಗಿದೆ. ಇದನ್ನು ರಿಪೋರ್ಟ್ ಮಾಡಿ ಡಿಲಿಟ್ ಮಾಡಿಸಲಾಗಿದೆ ಎನ್ನಲಾಗುತ್ತಿದೆ.

ಈ ಬಗ್ಗೆ 'ವಾರ್ತಾ ಭಾರತಿ'ಯ ಜೊತೆ ಮಾತನಾಡಿದ ಅಕ್ಷತ್, ಅದು ನನ್ನ ಹಳೆಯ ಖಾತೆಯಾಗಿದ್ದು, ಇಂದು ಬೆಳಗ್ಗೆ ಪೋಸ್ಟ್ ಹಾಕಿದ್ದೆ. ಆದರೆ ಇದೀಗ ಖಾತೆಯೇ ಡಿಲಿಟ್ ಆಗಿದೆ. ಪೋಸ್ಟ್ ಹಾಕಿದ ನಂತರ ನಾನು ಮನೆಯಿಂದ ಹೊರಹೋಗಿಲ್ಲ. ನನ್ನ ತೇಜೋವಧೆ ನಡೆಸಲಾಗುತ್ತಿದೆ ಎನ್ನುವ ಮಾಹಿತಿಗಳು ಲಭಿಸಿವೆ. ಆದರೆ ಯಾರಿಂದಲೂ ಬೆದರಿಕೆ ಬಂದಿಲ್ಲ ಎಂದು ಹೇಳಿದ್ದಾರೆ.

ಅಕ್ಷತ್ ಹಾಕಿರುವ ಫೇಸ್ ಬುಕ್ ಪೋಸ್ಟ್ ಈ ಕೆಳಗಿದೆ.

ನಾನು ಅಕ್ಷತ್ ಸುವರ್ಣ ಪಡುಮನೆ ಮಾಳ,

ನಾನೂ ಬಿಲ್ಲವ ಸಮುದಾಯದ ಯುವಕ. ನಾನೂ ಸಂಘದ ಸಿದ್ದಾಂತಗಳಿಗೆ ಮಣಿದು 2011ರಿಂದ 2016ರವರೆಗೆ ಬಜರಂಗದಳದ  ಸಾಮಾನ್ಯ ಕಾರ್ಯಕರ್ತನಿಂದ, ಮಾಳ ಘಟಕ ಸಂಚಾಲಕನಾಗಿ, ಬಜಗೋಳಿ ವಲಯ ಸಹಸಂಚಾಲಕನಾಗಿ, ಬಜಗೋಳಿವಲಯ ಸಂಚಾಲಕನಾಗಿ ಬಜರಂಗದಳವರೇ ನನ್ನ ಉಸಿರಾಗಿಸಿ ಹಲವಾರು ನಾಯಕರನ್ನು ಆದರ್ಶವಾಗಿಟ್ಟು, ನನಗೆ ನೀಡಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ಸಂಘಟನಗೆ ಯಾವುದೇ ಧಕ್ಕೆಯಾಗದಂತೆ ನಿಭಾಯಿಸಿದ್ದೇನೆ.

ಬಜರಂಗದಳದ "ಸೇವಾ ಸಂಸ್ಕಾರ ಸುರಕ್ಷಾ" ಧ್ಯೇಯದಂತೆ ಸೇವೆಯ ಕಡೆ ಹೆಚ್ಚು ಒಲವು ಹೊಂದಿದವನಾಗಿರುತ್ತೇನೆ. ಅದರಂತೆ ಅಶಕ್ತರಿಗೆ ನೆರವು, ರಕ್ತದಾನ ಹಾಗೂ ಬಜರಂಗದಳ ಕಾರ್ಕಳ ಪ್ರಖಂಡದ ಇತಿಹಾಸದಲ್ಲೇ ಹೊಸ ಪ್ರಯತ್ನ ಬಡಕುಟುಂಬಕ್ಕೆ ಮನೆ ಕಟ್ಟಿ ಕೊಡುವ ಆಸರೆ ಮನೆ ನಿರ್ಮಾಣ ಮಾಡಿಕೊಡುವಲ್ಲಿ ನಾನು ಪಟ್ಟ ಕಷ್ಟ ಸಾಮಾನ್ಯವಾದುದು ಏನಲ್ಲ.

ಆಸರೆ ಯೋಜನೆ ಹಲವಾರು ದಾನಿಗಳ, ವಾಟ್ಸಪ್ ಸಹಾಯಕ ಗ್ರೂಪ್ ಗಳ ಹಾಗೂ ಹಾಗೂ ಸಂಘ ಸಂಸ್ಥೆಗಳ ನೆರವಿನೊಂದಿಗೆ ಯಶಸ್ವಿಯಾಗಿ‌ ಸಾಗುತ್ತಿರುವಾಗ ಸಂಘಟನೆಯವರು ನಮ್ಮ ಕೈ ಹಿಡಿಯದೇ ಇರುವಾಗ ಹಠಕ್ಕೆ ಬಿದ್ದು ನಾನು ಕೊನೆಗೆ ಸಾಲ ಮಾಡಿ, ನನ್ನ ಹಾಗೂ ಗೆಳೆಯ ಮತ್ತು ಅವರ ಸಹೋದರಿಯ ಚಿನ್ನ ಅಡವಿಟ್ಟು ಯೋಜನೆ ಪೂರ್ಣಗೊಳಿಸಿ, ಜನವರಿ 3 2016ರಂದು ಹಲವಾರು ಗಣ್ಯರ ಉಪಸ್ತಿತಿಯಲ್ಲಿ ಗೃಹಪ್ರವೇಶ ಮಾಡಿ ಬಡ ಕುಟುಂಬಕ್ಕೆ ಮನೆ ಹಸ್ತಾಂತರ ಮಾಡಿರುತ್ತೇವೆ.

ಆ ದಿನದಿಂದ ನಾನು ಮಾನಸಿಕವಾಗಿ ನೊಂದು ಎಲ್ಲ ರೀತಿಯ ಸಂಘ ಸಂಸ್ಥೆಗಳಿಂದ ದೂರವಿದ್ದೇನೆ.

ಯಾಕಂದರೆ ಇಂದಿನವರೆಗೂ ನನ್ನ ಮನೆಯ ಕೆಲಸ ಪೂರ್ಣವಾಗಿಲ್ಲ. ಸುಮಾರು ಹತ್ತು ವರುಷಗಳಿಂದ ನಾನು ನನ್ನ ಕನಸಿನ ಮನೆ ನಿರ್ಮಾಣ ಮಾಡುವಲ್ಲಿ ಕನಸಾಗಿಯೇ ಉಳಿಸಿ ಸಾಲದ ಸುಳಿಯಲ್ಲಿ ಸಿಲುಕಿ ಪಡಬಾರದ ಕಷ್ಟ ಪಡುತ್ತಿದ್ದೇನೆ. ನಾನು ಮಾಡುತ್ತಿರುವ ಸಣ್ಣ ವ್ಯವಹಾರ ಹಾಗೂ ಮನೆಯ ಜವಾಬ್ದಾರಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲನಾಗಿರುತ್ತೇನೆ. ಬದುಕು ಶೋಚನೀಯ ಸ್ಥಿತಿಯಲ್ಲಿದೆ.

ಆದ್ದರಿಂದ ನಾನೂ ನನ್ನ ಮನೆ, ತಂಗಿಯ ಮದುವೆ ಹಾಗೂ ನನ್ನ ವೈಯಕ್ತಿಕ ಜೀವನ ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿರುವಾಗ ನನಗೆ ಪ್ರಪಂಚನೆ ಕತ್ತಲೆಯಾಗಿರುತ್ತದೆ. ಆ ಸಂದರ್ಭದಲ್ಲಿ ಅಶಕ್ತರಿಗೆ ಬೇರೆಯವರಿಂದ ಸಂಘ ಸಂಸ್ಥೆಗಳಿಂದ ಬೇಡಿ ಸಹಾಯ ಯಾಚಿಸುತ್ತಿದ್ದ ನಾನೂ ಇಂದು ನನಗೆ ವೈಯಕ್ತಿಕವಾಗಿ ಸಹಾಯ ಮಾಡಿ ಎಂದು ಯಾಚಿಸಲು ಹೋದಾಗ ಸಹಾಯಗಳು ಸಿಗಲಿಲ್ಲ, ಬರೀ ಆಶ್ವಾಸನೆಗಳೇ ಸಿಕ್ಕಿವೆ.

ಸಾಲ ಸೌಲಭ್ಯ ಪಡೆಯಲು ನನ್ನ ಬಳಿ ಯಾವುದೇ ಪೂರಕ ದಾಖಲೆಗಳು ಇಲ್ಲ. ಏನೋ ಒಂದು ಬಹು‌ದೊಡ್ಡ ನಿರೀಕ್ಷೆಯಲ್ಲಿ ಬೆಳಕನ್ನು ನೀಡುವರು ಎಂದು ನನ್ನ ವ್ಯವಹಾರದ ದಾಖಲೆಗಳನ್ನು ಕೊಟ್ಟು ಶಾಸಕರ ಬಳಿ ಸಾಲದ ರೂಪದಲ್ಲಿ ಸಹಾಯ ಕೇಳಲೂ ಹಲವಾರು ಭಾರಿ ಭೇಟಿಯಾದೆ. ಬರೀ ಆಶ್ವಾಸನೆಗಳೇ ಸಿಕ್ಕಿವೆ. ಸಹಾಯ ಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ನನಗೆ ಸಹಾಯ ಸಿಗಲಿಲ್ಲ.

ಈ ಸಂದರ್ಭ ನಾನು ಪರಿಚಯ ಇರುವ ಹಲವಾರು ನಾಯಕರನ್ನು ಭೇಟಿಯಾಗಿ ನನ್ನ ಕಷ್ಟಗಳನ್ನು ಹಂಚಿಕೊಂಡಿರುತ್ತೇನೆ. ಆದರೂ ಇಲ್ಲಿವರೆಗೂ ಯಾರು ನನ್ನ ನೆರವಿಗೆ ಬಂದಿರೊದಿಲ್ಲ.

ದಿಕ್ಕೆ ತೋಚದ ಈ ಸಮಯದಲ್ಲಿ ಕೊನೆ ಪ್ರಯತ್ನ ಎಂಬಂತೆ ಹಿಂದೆ ಬಜರಂಗದಳ ನಾಯಕರಾಗಿದ್ದ ಮಹೇಂದ್ರ ಕುಮಾರ್ ಅವರನ್ನು ಸಂಪರ್ಕಿಸಿದೆ. ಯಾಕೆಂದರೇ ಅವರು ಸಂಘಟನೆ ಬಿಡುವ ಸಮಯದಲ್ಲಿ ನಾನು ಸಂಘಟನೆಗೆ ಬಂದವನು. ಅವರ ಸಂಪರ್ಕ ಇರಲಿಲ್ಲ. ಆದರೆ ಅವರ ಬಗ್ಗೆ ಎಲ್ಲರೂ ಇತ್ತೀಚೆಗೆ ಬಂದವರು ಹಾಗೇ ಹೀಗೆ ಎಂದು ಹೇಳೋದು ಕೇಳಲ್ಪಟ್ಟಿದ್ದೆ. ಕೆಲವರು ಒಳ್ಳೆ ಮಾತು ಆಡೋದು ಕೇಳಿದ್ದೆ. ನನಗೇನು ಅವರ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಆದರೆ ಅವರೊಬ್ಬ ಸಾಮಾನ್ಯ ನಾಯಕನಲ್ಲ, ಕಷ್ಟಗಳಿಗೆ ಖಂಡಿತ ದನಿಯಾಗುವವರು ಎಂದು ಕೇಳಿದ್ದೆ. ಆ ಒಂದು ಕಾರಣಕ್ಕೆ ನಾನೂ ಏನೋ ಒಂದು ಆಶಾಕಿರಣವಿಟ್ಟು ಅವರನ್ನು ಸಂಪರ್ಕಿಸಿದೆ. ಸಂಪರ್ಕಿಸಿ ನನ್ನೆಲ್ಲ ಕಷ್ಟಗಳನ್ನ ಅವರ ಬಳಿ ಹೇಳಿದೆ. ಆಗ ಅವರು "ಅಕ್ಷತ್, ನಾನೇ ಕಷ್ಟದಲ್ಲಿರೋ ಮನುಷ್ಯ. ನನಗೆ ಈ ತರ ಸಹಾಯ ಮಾಡುವ ಶಕ್ತಿ ನನ್ನ ಬಳಿ ಇಲ್ಲ. ಆದರೆ ನಾನೂ ಬೇರೆಯವರನ್ನು ಸಂಪರ್ಕಿಸಿ ಸಹಾಯ ಮಾಡುತ್ತೇನೆ. ಯಾಕೆಂದರೆ ನಿನ್ನ ಕಷ್ಟ ನನಗೆ ಅರ್ಥವಾಯ್ತು, ಸಂಜೆ ನಾನು ವಾಪಸ್ ಕರೆ ಮಾಡುತ್ತೆನೆ" ಎಂದು ಹೇಳಿದವರು ಸಂಜೆ ಕರೆ ಮಾಡಿ 2ದಿನದಲ್ಲಿ ಬೆಂಗಳೂರಿಗೆ ಬಾ ಎಂದು ಕರೆದಾಗ ನಾನು ಅವರ ಬಳಿ ಹೋಗಿದ್ದೆ.

ಅಲ್ಲಿಂದ ಒಬ್ಬರ ಬಳಿ ನನ್ನ ಕರೆದುಕೊಂಡು ಹೋಗಿ ನನಗೆ ಸಹಾಯ ಮಾಡಿಸುತ್ತಾರೆ. ಆ ವ್ಯಕ್ತಿಯು ವೈಯಕ್ತಿಕವಾಗಿ ನನಗೆ ಪರಿಚಯ ಇರುವುದಿಲ್ಲ. ಆದರೇ ಅವರು ತುಂಬಾ ಪ್ರೀತಿಯಿಂದ ಮಾತನಾಡಿಸಿ ನನಗೆ ಸಹಾಯ ಮಾಡುತ್ತಾರೇ.....ಅವರೇ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ "ಜಮೀರ್ ಅಹ್ಮದ್" ಸಾರ್. ಅವರು ತೋರಿಸಿದ ಪ್ರೀತಿ, ನನಗೆ ನನ್ನ ಜೀವನ ರೂಪಿಸಿಕೊಳ್ಳುವಲ್ಲಿ ನೀಡಿದ ಭರವಸೆ ನೋಡಿ ನಾನೆಂತಹ ತಪ್ಪು ಮಾಡಿದೇ ಎಂದು ನನಗೆ ಗೊತ್ತಿಲ್ಲದಂತೆ ಕಣ್ಣೀರು ಹರಿಸಿದೆ.

ಆ ಸಂದರ್ಭ ನನಗನಿಸಿದ್ದು ನಾನು ಹಲವಾರು ವರುಷಗಳಿಂದ ಪರಿಚಯ ಇದ್ದ ಸಂಘದ ನಾಯಕರ ಬಳಿ ಸಾಲದ ರೂಪದಲ್ಲಿ‌ ಸಹಾಯ ಬೇಡಿದಾಗ ಭರವಸೆ ಮಾತ್ರ ನೀಡಿದವರ ಮಧ್ಯೆ ಇವರು ಯಾರೋ ಗುರುತು ಪರಿಚಯವಿಲ್ಲದವರು, ನಾನು ಮಹೇಂದ್ರ ಅಣ್ಣ ನಿಗೆ ಕರೆಮಾಡಿ  ಎರಡೇ ದಿನದಲ್ಲಿ ನನ್ನ ಕರೆಸಿಕೊಂಡು ಸಹಾಯ ಮಾಡಿದ ಜಮೀರ್ ಅಣ್ಣ ನನಗೇ ತುಂಬಾನೇ ಹೆಮ್ಮೆ ಅನಿಸುತ್ತಿದೆ.

ಜಮೀರ್ ಅಣ್ಣ ಕೊಟ್ಟ ಭರವಸೆ "ನೀನು ಏನೂ ಕಣ್ಣೀರು ಹಾಕಿ ಕೊರಗಬೇಡ. ನಿನಗೆ ಅಣ್ಣನ ತರಹ ನಾನಿದ್ದೇನೆ. ತಲೆ ಕೆಡಿಸಬೇಡ ನಿನ್ನ ಜೊತೆ ನಾನಿದ್ದೇನೆ. ಮುಂದೆ ಕೂಡ ನಾನೂ ನಿನಗೆ ಬೇಕಾದ ಸಹಾಯ ಮಾಡುವೆ" ಎಂದು ಭರವಸೆ ನೀಡಿ ನನ್ನ ಪ್ರೀತಿಯಿಂದ ಕಳುಹಿಸಿ ಕೊಟ್ಟರು. ಇದೇ ಅಲ್ಲವೇ ನನಗೆ ನನ್ನ ಜೀವನಕ್ಕೆ ಸ್ಪೂರ್ತಿ?

ಎಲ್ಲಿ ಕಳೆದು ಹೊಗಿದ್ದೆ, ಎಲ್ಲಿ ದಾರಿ ತಪ್ಪಿದ್ದೆ ಎಂದು ನನಗೀಗ ಅರ್ಥವಾಗಿದೆ. ಸಂಘಟನೆಯೇ ನನ್ನುಸಿರು, ನನ್ನ ಸಂಘದ ನಾಯಕರೇ ನನಗೇ ಆದರ್ಶ ಇದೆಲ್ಲಾ ಬರಿ ಭ್ರಮೆಯಷ್ಟೆ ಎಂಬುದು ನನ್ನ ಸ್ವಂತ ಅನುಭವ. ನಮ್ಮ ಕಷ್ಟಕ್ಕೆ ಹೇಳಿಕೊಂಡಾಗ ನಾನು ಆದರ್ಶವಾಗಿಸಿ ಪೂಜಿಸುತ್ತಿದ್ದ ನಾಯಕರು ನನ್ನ ಸಹಾಯಕ್ಕೆ ಬರಲ್ಲ, ಬರೀ ಕೇಸು, ಪ್ರತಿಭಟನೆ, ಹೋರಾಟಕ್ಕಷ್ಟೆ ನಾವು ಸೀಮಿತವೇ. ನಮ್ಮ ಮನೆ, ಕುಟುಂಬದವರ ಮಾತನ್ನು ಧಿಕ್ಕರಿಸಿ ಬರ್ತಿವೀ, ಆದರೇ ಕೊನೆಗೆ ನಮ್ಮ ಕಷ್ಟದ ಪರಿಸ್ಥಿತಿ ಎದುರಾದಾಗ ಉಸಿರಾಗಿಸಿಕೊಂಡ ಸಂಘಟನೆ ನಮ್ಮ ಜೊತೆ ಇರಲ್ಲ ಎಂದು ನನಗೀಗ ಅರ್ಥವಾಗಿದೆ. ಯುವಕರೇ ನೀವಾದರೂ ಇನ್ನು ಮುಂದೆ ದಾರಿ‌ ತಪ್ಪದಂತೆ ಎಚ್ಚೆತ್ತುಕೊಳ್ಳಿ. ತಂದೆ ತಾಯಿ,ಅಕ್ಕ,ತಂಗಿ ಯ ಕಣ್ಣಿರಿಗೆ ಕಾರಣರಾಗದಿರಿ.

ಏನೇ ಆಗಲಿ ಆದರೆ ನಾವು ಸಮಾಜವನ್ನು ಯಾವ ರೀತಿ ಕಟ್ಟಬೇಕು ಎಂದು ಸ್ಪೂರ್ತಿ ನೀಡಿದ ಮಹೇಂದ್ರ ಕುಮಾರ್ ಮತ್ತು ಜಮೀರ್ ಅಹ್ಮದ್ ಅವರ ಭೇಟಿಯ ಬಳಿಕ ಅರ್ಥಪೂರ್ಣವಾಗಿದೆ.

ಧನ್ಯವಾದಗಳು ಸಾರ್ ನಿಮಗಿಬ್ಬರಿಗೂ....

ಇಂತೀ ನಿಮ್ಮ,

ಅಕ್ಷತ್ ಸುವರ್ಣ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X