ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಭಾರತೀಯ ಪಾದ್ರಿಗೆ 6 ವರ್ಷ ಜೈಲು

ನ್ಯೂಯಾರ್ಕ್, ಮಾ. 31: ಅಮೆರಿಕದಲ್ಲಿ ಹದಿಹರೆಯದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ಶೋಷಣೆ ನಡೆಸಿರುವುದಕ್ಕಾಗಿ ಓರ್ವ ಮಾಜಿ ಭಾರತೀಯ ರೋಮನ್ ಕೆಥೊಲಿಕ್ ಪಾದ್ರಿಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ದಕ್ಷಿಣ ಡಕೋಟದ ರ್ಯಾಪಿಡ್ ಸಿಟಿ ಚರ್ಚ್‌ನಲ್ಲಿ ಕಳೆದ ವರ್ಷ 13 ವರ್ಷದ ಬಾಲಕಿಯೊಬ್ಬಳನ್ನು ಅನುಚಿತವಾಗಿ ಸ್ಪರ್ಶಿಸಿರುವುದನ್ನು 38 ವರ್ಷದ ಜಾನ್ ಪ್ರವೀಣ್ ಫೆಬ್ರವರಿಯಲ್ಲಿ ಒಪ್ಪಿಕೊಂಡಿದ್ದರು ಎಂದು ‘ರ್ಯಾಪಿಡ್ ಸಿಟಿ ಜರ್ನಲ್’ ಪತ್ರಿಕೆ ವರದಿ ಮಾಡಿದೆ.
ನ್ಯಾಯಾಧೀಶ ಸ್ಟೀವನ್ ಮ್ಯಾಂಡೆಲ್ ಶುಕ್ರವಾರ ಶಿಕ್ಷೆಯನ್ನು ಘೋಷಿಸಿದರು. ಅಪರಾಧಿಗೆ ಗರಿಷ್ಠ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಬೇಕೆಂದು ಪ್ರಾಸಿಕ್ಯೂಟರ್ ಈ ಮೊದಲು ಕೋರಿದ್ದರು. ಆದರೆ, ಪ್ರವೀಣ್‌ನ ಕೃತ್ಯಕ್ಕೆ ಈ ಶಿಕ್ಷೆ ಸಾಕಾಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು ಎಂದು ವರದಿ ತಿಳಿಸಿದೆ.
ಮೂರು ವರ್ಷಗಳ ಬಳಿಕ ಅವರು ಪರೋಲ್‌ಗೆ ಅರ್ಹರಾಗುತ್ತಾರೆ ಎಂದು ನ್ಯಾಯಾಧೀಶರು ತನ್ನ ತೀರ್ಪಿನಲ್ಲಿ ಹೇಳಿದ್ದಾರೆ.
Next Story