ಗೋಪಿಚಂದ್ ಅಕಾಡಮಿಯೊಂದಿಗೆ ಐಐಟಿ ಖರಗ್‌ಪುರ ಒಪ್ಪಂದ
ಹೈದರಾಬಾದ್,ಮಾ.31: ಆಟಗಾರರ ಸಂತೋಷ ಮತ್ತು ಯೋಗಕ್ಷೇಮದ ಬಗ್ಗೆ ಜಂಟಿ ತರಬೇತಿ ಮತ್ತು ಸಂಶೋಧನೆ ನಡೆಸುವ ಉದ್ದೇಶದಿಂದ ಐಐಟಿ ಖರಗ್‌ಪುರ, ಹೈದರಾಬಾದ್‌ನ ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡಮಿ (ಪಿಜಿಬಿಎ) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.
ತಮ್ಮ ಸಂಸ್ಥೆಗಳ ಪರವಾಗಿ ಐಐಟಿ ಖರಗ್‌ಪುರದ ನಿರ್ದೇಶಕ ಪ್ರೊ.ಪಿ.ಪಿ ಚಕ್ರವರ್ತಿ ಮತ್ತು ಭಾರತೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ರಾಷ್ಟ್ರೀಯ ಕೋಚ್ ಗೋಪಿಚಂದ್ ಶನಿವಾರ ದಿಲಿ್ಲಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಅಮೆರಿಕ ಮೂಲದ ಉದ್ಯಮಿ ಮತ್ತು ಐಐಟಿ ಖರಗ್‌ಪುರದ ಹಳೆ ವಿದ್ಯಾರ್ಥಿ ಹಾಗೂ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡಮಿಯ ಪ್ರಾಯೋಜಕ ಮತ್ತು ಐಐಟಿ ಖರಗ್‌ಪುರದಲ್ಲಿ ಸಂತೋಷ ವಿಜ್ಞಾನ ರೇಖಿ ಕೇಂದ್ರಕ್ಕೆ ದೇಣಿಗೆ ನೀಡಿರುವ ಎಸ್.ಎಸ್ ರೇಖಿ ಈ ಜೊತೆಗಾರಿಕೆ ರೂಪುಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಸದ್ಯ 2019ರ ಜೂನ್‌ನಿಂದ ತರಬೇತಿ ಕಾರ್ಯಕ್ರಮ ಆರಂಭವಾಗಲಿದ್ದು, ಈ ಉದ್ದೇಶಕ್ಕಾಗಿ ಪ್ರತಿ ಅಥ್ಲೀಟ್‌ನ ಸಂಪೂರ್ಣ ವಿವರ ಮತ್ತು ದತ್ತಾಂಶವನ್ನು ಸಿದ್ಧಪಡಿಸಲಾಗುವುದು. ಪಿಜಿಬಿಎಯ ಆಟಗಾರರ ಆಟದ ಸಾಮರ್ಥ್ಯ ಮತ್ತು ಪ್ರತಿರೋಧವನ್ನು ಹೆಚ್ಚಿಸುವ ಉದ್ದೇಶದಿಂದ ಅಥ್ಲೀಟ್‌ಗಳ ಮಾನಸಿಕ ಯೋಗಕ್ಷೇಮವನ್ನು ಉತ್ತಮಗೊಳಿಸುವತ್ತ ಗಮನಹರಿಸುವ ಕಾರ್ಯಕ್ರಮಗಳನ್ನುಐಐಟಿ ಖರಗ್ಪುರ ಅಭಿವೃದ್ಧಿಪಡಿಸಲಿದೆ.
ಈ ಕುರಿತು ಮಾತನಾಡಿದ ಪ್ರೊ.ಚಕ್ರವರ್ತಿ, ‘‘ನಮ್ಮ ಉದ್ದೇಶ ಮನಸ್ಸಿಗೆ ಸಂಬಂಧಿಸಿದ ತರಬೇತಿಯನ್ನು ಹೆಚ್ಚಿಗೆ ನೀಡುವುದಾಗಿದೆ. ಇದರ ಹಿಂದಿನ ಗುರಿ ಸಂತುಷ್ಟ ಆಟಗಾರರನ್ನು ತಯಾರಿುವುದೇ ಆಗಿದೆ’’ ಎಂದು ತಿಳಿಸಿದ್ದಾರೆ.
ಗೋಪಿಚಂದ್ ಅಕಾಡಮಿಯಲ್ಲಿ ತರಬೇತಿ ಪಡೆಯುತ್ತಿರುವ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು, ಇಂತಹ ಕಾರ್ಯಕ್ರಮಗಳಿಂದ ಆಟಗಾರರಿಗೆ ಬಹಳ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.







