Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ದ್ರೌಪದಿ ಪಾತ್ರ ಪರಿಚಯ

ದ್ರೌಪದಿ ಪಾತ್ರ ಪರಿಚಯ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ31 March 2019 6:31 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ದ್ರೌಪದಿ ಪಾತ್ರ ಪರಿಚಯ

ಮಹಾಭಾರತದ ಕೇಂದ್ರ ಪಾತ್ರ ‘ದ್ರೌಪದಿ’. ಮಹಾಭಾರತ ಯುದ್ಧ ನಡೆಯುವುದು ಭೂಮಿಗಾಗಿ ಎಷ್ಟು ನಿಜವೋ ದ್ರೌಪದಿಗಾಗಿಯೂ ಅಷ್ಟೇ ನಿಜ. ದ್ರೌಪದಿಯನ್ನು ವರಿಸಲು ವಿಫಲನಾದ ದುರ್ಯೋಧನ, ಕರ್ಣರಿಂದ ತೆರೆದುಕೊಳ್ಳುವ ಮಹಾಭಾರತ, ಬಳಿಕ ಇಂದ್ರಪ್ರಸ್ಥದಲ್ಲಿ ದುರ್ಯೋಧನನಿಗಾದ ಅವಮಾನದೊಂದಿಗೆ ಬೆಳೆಯುತ್ತಾ ಹೋಗುತ್ತದೆ. ಐದು ಗ್ರಾಮಗಳನ್ನು ಕೊಟ್ಟರೆ ಸಾಕು, ಯುದ್ಧ ಬೇಡ ಎನ್ನುವ ಪಾಂಡವರನ್ನು ಯುದ್ಧ ಮಾಡಲೇಬೇಕು ಎಂದು ಒತ್ತಾಯಿಸುವುದು ದ್ರೌಪದಿಯ ಅಪಮಾನ, ನೋವು, ಸಂಕಟ, ಆಕ್ರೋಶ ಮತ್ತು ಸೇಡು. ಪುರಾಣದ ಈ ಗಟ್ಟಿ ಪಾತ್ರದ ಆಳದಲ್ಲಿ ಸ್ತ್ರೀಸಂವೇದನೆಯ ತೊರೆಯಿದೆ. ವ್ಯಾಸ ಈ ಪಾತ್ರವನ್ನು ಅತ್ಯಂತ ಆಧುನಿಕವಾಗಿ ಕಂಡಿದ್ದಾನೆ. ದ್ರೌಪದಿಯ ಪಾತ್ರ ಬಳಿಕವೂ ಹಲವು ಕವಿಗಳಿಂದ ಬೆಳೆಯುತ್ತಾ ಬಂದಿದೆ. ಆಧುನಿಕ ಸಾಹಿತ್ಯದಲ್ಲೂ ದ್ರೌಪದಿಯ ಕುರಿತಂತೆ ಕಾದಂಬರಿ, ವಿಶ್ಲೇಷಣೆಗಳು ಸಾಕಷ್ಟಿವೆ. ದ್ರೌಪದಿ ಬರೆದಷ್ಟೂ ಮುಗಿಯದ ಹೆಣ್ಣಿನ ತಳಮಳ.

 ‘ಮಾನನೀಯೆ ದ್ರೌಪದಿ’ ಕೃತಿಯಲ್ಲಿ ಸತ್ಯವತಿ ರಾಮನಾಥ ಅವರು ಕುಮಾರ ವ್ಯಾಸ ಭಾರತ ಹಾಗೂ ಪುರಾಣಗಳನ್ನು ಆಧರಿಸಿ ಆಕೆಯ ಪಾತ್ರವನ್ನು ಮರುಕಟ್ಟುವ ಪ್ರಯತ್ನವನ್ನು ಮಾಡಿದ್ದಾರೆ. ಮೂಲ ಮಹಾಭಾರತ, ಕೌಲಗಿ ಶೇಷಾಚಾರ್ ಅವರ ಚಕ್ರತೀರ್ಥ, ಆ. ರಾ. ಸೇತುರಾಮ್‌ರ ಕುಮಾರವ್ಯಾಸ ಭಾರತ ಹಾಗೂ ಹಲವು ಉಪಕತೆಗಳನ್ನು ಆಧರಿಸಿ ಲೇಖನಗಳನ್ನು ಬರೆದಿದ್ದಾರೆ. ದ್ರೌಪದಿಯ ಜನ್ಮ, ದ್ರೌಪದಿಯ ಸ್ವಯಂವರ, ರಾಣಿಯಾಗಿ ದ್ರೌಪದಿ, ಪತಿವ್ರತೆ ದ್ರೌಪದಿ, ವೀರವನಿತೆಯಾಗಿ ದ್ರೌಪದಿ, ಶ್ರೀಕೃಷ್ಣನ ಸಖಿಯಾಗಿ, ಗೃಹಣಿಯಾಗಿ ಹೀಗೆ ಬೇರೆ ಬೇರೆ ಮಗ್ಗುಲಲ್ಲಿ ದ್ರೌಪದಿಯನ್ನು ನೋಡಲಾಗಿದೆ. ದ್ರೌಪದಿಯ ಕುರಿತಂತೆ ಇರುವ ಬೇರೆ ಬೇರೆ ಉಪಕತೆಗಳು, ದ್ರೌಪದಿ ವಸ್ತ್ರಾಪಹರಣ, ಸೈಂಧವನಿಂದ ಅಪಹರಣ ಇವುಗಳನ್ನೂ ಸಂಗ್ರಹಿಸಲಾಗಿದೆ.

 ಇದು ಯಾವುದೇ ವಿಮರ್ಶಾತ್ಮಕ, ಸಂಶೋಧನಾತ್ಮಕ ಲೇಖನಗಳ ಸಂಗ್ರಹಗಳಲ್ಲ ಎನ್ನುವುದನ್ನು ಗಮನಿಸಬೇಕು. ಉದಾಹರಣೆಗೆ, ಯುಗಾಂತ ಕೃತಿಯಲ್ಲಿ ಇರಾವತಿ ಕರ್ವೆಯಂತಹ ವಿದ್ವಾಂಸರು ಬೇರೆ ಬೇರೆ ಪಾತ್ರಗಳನ್ನು ವಿಶ್ಲೇಷಣಾತ್ಮಕವಾಗಿ ವಿವರಿಸುತ್ತಾರೆ. ಹೊಸ ಹೊಳಹುಗಳನ್ನು ನೀಡುತ್ತಾರೆ. ಆದರೆ ಈ ಕೃತಿಯಲ್ಲಿ ದ್ರೌಪದಿಯ ಕುರಿತಂತೆ ಇರುವ ಸಿದ್ಧ ಕತೆಗಳನ್ನೇ ಮರು ನಿರೂಪಿಸಲಾಗಿದೆ. ಲೇಖಕಿ ದ್ರೌಪದಿಯ ಕುರಿತಂತೆ ಹೊಸ ಹೊಳಹುಗಳನ್ನು ನೀಡುವುದಿಲ್ಲ.198 ಪುಟಗಳ ಈ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಹೊರ ತಂದಿದೆ. ಮುಖಬೆಲೆ 150 ರೂಪಾಯಿ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಾರುಣ್ಯಾ
-ಕಾರುಣ್ಯಾ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X