ಮೋದಿಜಿಯ ಸೈನ್ಯ ಎಂದ ಆದಿತ್ಯನಾಥ್ : ವರದಿ ಕೇಳಿದ ಆಯೋಗ

ಹೊಸದಿಲ್ಲಿ , ಎ. 1 : ಗಾಝಿಯಾಬಾದ್ ನಲ್ಲಿ ಚುನಾವಣಾ ಸಮಾವೇಶವೊಂದನ್ನು ಉದ್ದೇಶಿಸಿ ಭಾಷಣ ಮಾಡುವಾಗ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಭಾರತೀಯ ಸೇನೆಯನ್ನು ಮೋದಿ ಜಿ ಕಿ ಸೇನಾ ( ಮೋದಿಜಿ ಅವರ ಸೇನೆ ) ಎಂದು ಹೇಳಿರುವ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಗಾಝಿಯಾಬಾದ್ ಜಿಲ್ಲಾಧಿಕಾರಿ ಬಳಿ ವರದಿ ಕೇಳಿದೆ.
ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡುವಾಗ ಆದಿತ್ಯನಾಥ್ ಅವರು ಪದೇಪದೇ ಮೋದಿ ಜಿ ಕಿ ಸೇನಾ ಎಂದು ಭಾರತೀಯ ಸೇನೆಯ ಬಗ್ಗೆ ಉಲ್ಲೇಖಿಸಿದ್ದರು. ಇದು ನೀತಿ ಸಂಹಿತೆಯ ಉಲ್ಲಂಘನೆ ಹಾಗು ಸೇನೆಗೆ ಮಾಡಿದ ಅವಮಾನ ಎಂದು ವಿಪಕ್ಷಗಳು ದೂರಿದ್ದವು. ಈಗ ಚುನಾವಣಾ ಆಯೋಗ ಈ ಬಗ್ಗೆ ವರದಿ ಕೇಳಿದೆ.
Next Story





