Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಣಿಪಾಲ ಹೆರಿಟೇಜ್ ವಿಲೇಜ್‌ನಲ್ಲಿ...

ಮಣಿಪಾಲ ಹೆರಿಟೇಜ್ ವಿಲೇಜ್‌ನಲ್ಲಿ ‘ನಯಂಪಳ್ಳಿ ಮನೆ’ ಪುನರ್ನಿಮಾಣ

ವಾರ್ತಾಭಾರತಿವಾರ್ತಾಭಾರತಿ1 April 2019 9:49 PM IST
share
ಮಣಿಪಾಲ ಹೆರಿಟೇಜ್ ವಿಲೇಜ್‌ನಲ್ಲಿ ‘ನಯಂಪಳ್ಳಿ ಮನೆ’ ಪುನರ್ನಿಮಾಣ

ಉಡುಪಿ, ಎ.1: ಮಣಿಪಾಲದ ಪಾರಂಪರಿಕ ವಸ್ತುಗಳ ಸಂಗ್ರಹಕಾರ ದಿ. ವಿಜಯನಾಥ ಶೆಣೈ ಅವರ ಕನಸಿನ ಕೂಸಾದ, ಮಣಿಪಾಲದ ಹಸ್ತಶಿಲ್ಪ ಟ್ರಸ್ಟ್ ಮೂಲಕ ಸರಕಾರ ನೀಡಿದ ಆರು ಎಕರೆ ಜಾಗದಲ್ಲಿ ತಲೆ ಎತ್ತಿ ನಿಂತಿರುವ ‘ಮಣಿಪಾಲ ಹೆರಿಟೇಜ್ ವಿಲೇಜ್’ (ಮಣಿಪಾಲ ಕಲಾಗ್ರಾಮ)ನಲ್ಲಿ ಸದ್ಯವೇ ಮಂಗಳೂರು ಮೂಲದ ಸ್ವಾತಂತ್ರ ಹೋರಾಟಗಾರ್ತಿ, ಸಮಾಜ ಪರಿವರ್ತಕಿ, ಹಾಗೂ ದೇಶದ ಕರಕುಶಲ ಕಲೆಗೆ ಹೊಸ ಅವಕಾಶಗಳನ್ನು ತೆರೆದಿಟ್ಟ ಬಹುಮುಖ ಪ್ರತಿಭೆಯ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಮಂಗಳೂರಿನ ‘ನಯಂಪಳ್ಳಿ ಮನೆ’ಯನ್ನು ಪುನರ್ನಿಮಿಸಲಾಗುವುದು ಎಂದು ಟ್ರಸ್ಟ್‌ನ ಸದಸ್ಯ ರಾಜೇಶ್ ಪೈ ತಿಳಿಸಿದ್ದಾರೆ.

ಇದಕ್ಕೆ ಪೂರ್ವಭಾವಿಯಾಗಿ ಚೆನ್ನೈನ ಭಾರತದ ಕರಕುಶಲ ಮಂಡಳಿ (ಸಿಸಿಐ) ನೆರವಿನಿಂದ ಮಣಿಪಾಲ ಕಲಾಗ್ರಾಮದ ವಡೇರಹೋಬಳಿ ಮನೆಯಲ್ಲಿ ತೆರೆಯಲಾದ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಬದುಕು-ಸಾಧನೆಗಳನ್ನು ಪರಿಚಯಿಸುವ ಕಲಾಕೃತಿ-ಛಾಯಾಚಿತ್ರಗಳ ಸಂಗ್ರಹ ‘ಕಮಲಾ ಗ್ಯಾಲರಿ’ಯನ್ನು ಖ್ಯಾತ ರಂಗಕರ್ಮಿ ಹೆಗ್ಗೋಡಿನ ಪ್ರಸನ್ನ ಅವರು ಇಂದು ಉದ್ಘಾಟಿಸಿದರು.

ಯಕ್ಷಗಾನವೂ ಸೇರಿದಂತೆ ದೇಶದ ಹೆಚ್ಚಿನೆಲ್ಲಾ ಶಾಸ್ತ್ರೀಯ, ಸಾಂಪ್ರದಾಯಿಕ, ಜಾನಪದ ಕಲಾಪ್ರಕಾರಗಳಿಗೆ ಸರಕಾರದ ಮೂಲಕ ಪ್ರೋತ್ಸಾಹಗಳನ್ನು ನೀಡಿ, ಅವುಗಳಿಗೆ ಹೊಸ ದಾರಿಯನ್ನು ತೋರಿಸಿಕೊಟ್ಟ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಮೊದಲ ಪತಿ ಕೃಷ್ಣ ರಾವ್ ಅವರ ಮಂಗಳೂರಿನ ಶಿವಭಾಗ್‌ನಲ್ಲಿರುವ ‘ನಯಂಪಳ್ಳಿ ಮನೆ’ಯ ಬಿಡಿ ಭಾಗ ಹಾಗೂ ವಿವಿಧ ವಸ್ತುಗಳನ್ನು ಇದೀಗ ಹಸ್ತಶಿಲ್ಪ ಟ್ರಸ್ಟ್‌ಗೆ ಮನೆಯವರು ನೀಡಿದ್ದು, ಇದನ್ನು ಬಳಸಿಕೊಂಡು ಕಲಾಗ್ರಾಮದ ನಯಂಪಳ್ಳಿ ಮನೆಯನ್ನು ಪುನರ್ನಿಮಿಸಲಾಗುತ್ತದೆ ಎಂದು ರಾಜೇಶ್ ಪೈ ತಿಳಿಸಿದರು.

ಸುಮಾರು 2.88 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಈ ಮನೆಯಲ್ಲಿ ಕಮಲಾದೇವಿ ಚಟ್ಪೋಪಾಧ್ಯಾಯರಿಗೆ ಸೇರಿದ ಈಗ ದೇಶದ ನಾನಾ ಕಡೆಗಳಲ್ಲಿ ಇರುವ ವಿವಿಧ ವಸ್ತುಗಳನ್ನು ಪ್ರದರ್ಶಿಸಲಾಗುವುದು. ಅಲ್ಲದೇ ಭಾರತ ಕರಕುಶಲ ಮಂಡಳಿ (ಸಿಸಿಐ)ಯವರ ‘ಕರಕುಶಲ ವಸ್ತುಗಳ ಸಂಗ್ರಹಾಲಯ’ವೂ ಇಲ್ಲಿರುತ್ತದೆ. ಅಲ್ಲದೇ ಇಂದು ಉದ್ಘಾಟನೆಗೊಂಡ ಕಮಲ ಗ್ಯಾಲರಿಯನ್ನು ಮುಂದೆ ನಯಂಪಳ್ಳಿ ಮನೆಗೆ ವರ್ಗಾಯಿಸಲಾಗುವುದು ಎಂದು ಅವರು ವಿವರಿಸಿದರು.

ಪದ್ಮಭೂಷಣ, ಪದ್ಮವಿಭೂಷಣ, ಮ್ಯಾಗ್ಸಸೆ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳನ್ನು ಪಡೆದಿರುವ ಕಮಲಾದೇವಿ ಚಟ್ಟೋಪಾಧ್ಯಾಯ ಅವರು 1903ರ ಎ.3ರಂದು ಮಂಗಳೂರಿನಲ್ಲಿ ಜನಿಸಿದ್ದರು. ಅವರು ತಮ್ಮ 85ನೇ ವಯಸ್ಸಿನಲ್ಲಿ 1988ರ ಅ.29ರಂದು ಮುಂಬಯಿಯಲ್ಲಿ ನಿಧನರಾಗಿದ್ದರು. ತಮ್ಮ 14ನೇ ವಯಸ್ಸಿನಲ್ಲಿ ಮದುವೆಯಾಗಿ 16ಹರೆಯದಲ್ಲಿ ವಿಧವೆಯಾದ ಕಮಲಾದೇವಿ, ಬಳಿಕ ಚೆನ್ನೈನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ, ಅಲ್ಲಿ ಪರಿಚಯವಾದ ಸರೋಜಿನಿ ನಾಯ್ದು ಅವರ ಸಹೋದರ ಬಹುಮುಖ ಪ್ರತಿಭೆಯ ಹರೀಂದ್ರನಾಥ ಚಟ್ಪೋಪಾಧ್ಯಾಯರನ್ನು ಎಲ್ಲಾ ಸಂಪ್ರದಾಯ, ಕಟ್ಟುಕಟ್ಟಲೆ ಹಾಗೂ ಎಲ್ಲಾ ವಿರೋಧವನ್ನು ಲೆಕ್ಕಿಸದೇ ತಮ್ಮ 20ನೇ ಹರೆಯದಲ್ಲಿ ವಿವಾಹವಾಗಿ ಸಾಮಾಜಿಕ ಕ್ರಾಂತಿಗೆ ಕಾರಣರಾಗಿದ್ದರು.

ಮಂಗಳೂರಿನಿಂದ ಮಣಿಪಾಲಕ್ಕೆ

ಕಮಲಾದೇವಿ ಅವರು ಉಡುಪಿ ಕಲ್ಯಾಣಪುರ ಬಳಿಯ ನಯಂಪಳ್ಳಿ ಮನೆತನದ ಕೃಷ್ಣ ರಾವ್ (1917-19) ಅವರನ್ನು ಮದುವೆಯಾಗಿದ್ದರು. ನಯಂಪಳ್ಳಿ ಮೂಲದ ಅನೇಕ ಸಾರಸ್ವತ ಕುಟುಂಬದವರು ದೇಶದ ವಿವಿಧೆಡೆ ಗಳಲ್ಲಿ ನೆಲೆಸಿದ್ದಾರೆ. ಮಂಗಳೂರಿನ ಶಿವಬಾಗ್‌ನಲ್ಲಿದ್ದ ಸುಬ್ಬಣ್ಣ ಶಿವರಾವ್ ಅವರ ಪಾಲಿಗೆ ಕಮಲಾ ಅವರ ಮನೆ ಬಂದಿತ್ತು. ಸುಬ್ಬಣ್ಣ ಅವರು ಬಹು ವರ್ಷ ಮನೆಯನ್ನು ನಿರ್ವಹಿಸಿ 2017ರಲ್ಲಿ ಹಸ್ತ ಶಿಲ್ಪಟ್ರಸ್ಟ್‌ನ ಕಾರ್ಯದರ್ಶಿಯಾಗಿದ್ದ ವಿಜಯನಾಥ ಶೆಣೈ ಅವರಿಗೆ ಹಸ್ತಾಂತರಿಸಿದರು. ಆ ಮನೆಯನ್ನು ಕಳಚಿ ತರಲು ಟ್ರಸ್ಟ್‌ಗೆ ಸುಮಾರು 6 ಲ.ರೂ. ಖರ್ಚಾಗಿತ್ತು. ಸುಬ್ಬಣ್ಣ ಅವರು ಒಂದು ಲಕ್ಷ ರೂ. ದೇಣಿಗೆಯನ್ನೂ ನೀಡಿದ್ದರು. ಇದೀಗ ಈ ಮನೆಯನ್ನು ಕಲಾಗ್ರಾಮದ ಆವರಣದಲ್ಲಿ ಮರು ಸ್ಥಾಪಿಸಲು 2.8 ಕೊೀ.ರೂ. ಯೋಜನೆ ಸಿದ್ಧಗೊಂಡಿದೆ.
ಕಮಲಾ ದೇವಿ ಅವರಿಗೆ ವಿಜಯನಾಥ್ ಶೆಣೈ ಅವರೊಂದಿಗೆ ಆತ್ಮೀಯ ಸಂಬಂಧವಿತ್ತು. 1976ರಿಂದ 80ರ ಅವಧಿಯಲ್ಲಿ ಅನೇಕ ಬಾರಿ ಶೆಣೈ ಅವರ ಹಸ್ತಶಿಲ್ಪಕ್ಕೆ ಭೇಟಿ ನೀಡಿ ಅವರ ಅಪೂರ್ವ ಸಂಗ್ರಗಳನ್ನು ನೋಡಿ ಖುಷಿ ಪಟ್ಟಿದ್ದರು.

ಕಮಲಾ ದೇವಿ ಅವರಿಗೆ ವಿಜಯನಾಥ್ ಶೆಣೈ ಅವರೊಂದಿಗೆ ಆತ್ಮೀಯ ಸಂಬಂವಿತ್ತು.1976ರಿಂದ80ರಅವಧಿಯಲ್ಲಿಅನೇಕಬಾರಿಶೆಣೈಅವರಹಸ್ತಶಿಲ್ಪಕ್ಕೆೇಟಿ ನೀಡಿ ಅವರ ಅಪೂರ್ವ ಸಂಗ್ರಹಗಳನ್ನು ನೋಡಿ ಖುಷಿ ಪಟ್ಟಿದ್ದರು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X