ಮೀನುಲಾರಿ ಕಳವು: ಆರೋಪಿ ಸೆರೆ; ಟೆಂಪೊ ಸಹಿತ ಆರು ಲಕ್ಷದ ಸೊತ್ತು ವಶ

ಮಂಗಳೂರು, ಎ.1: ನಗರದ ಧಕ್ಕೆಯಲ್ಲಿ ನಿಲ್ಲಿಸಲಾದ ಮೀನಿನ ಲಾರಿ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಪಾಂಡೇಶ್ವರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಗುತ್ತಿಗಾರು ಮುತ್ಲಾಜೆ ನಿವಾಸಿ ಕಿಶೋರ್‌ಕುಮಾರ್ (26) ಬಂಧಿತ ಆರೋಪಿ.
ಎ.1ರಂದು ಪಾಂಡೇಶ್ವರ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯಿಂದ ‘407’ ಟೆಂಪೋ ಸೇರಿದಂತೆ ಒಟ್ಟು ಆರು ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.
Next Story





