ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಭಯೋತ್ಪಾದಕ: ಶಾಸಕ ದೇವಾನಂದ ಚೌಹಾಣ್ ವಿವಾದಾತ್ಮಕ ಹೇಳಿಕೆ

ದೇವಾನಂದ ಚೌಹಾಣ್-ರಮೇಶ್ ಜಿಗಜಿಣಗಿ
ವಿಜಯಪುರ,ಎ.2: ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಭಯೋತ್ಪಾದಕ ಇದ್ದಂತೆ ಎಂದು ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚೌಹಾಣ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಂಕೇತಿಕವಾಗಿ ಮೈತ್ರಿ ಅಭ್ಯರ್ಥಿ ಸುನಿತಾ ಚೌಹಾಣ್ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ಅಕ್ಕ-ಕಾಕ-ಮಾಮಾ ಎಂದು ರಮೇಶ್ ಜಿಗಜಿಣಗಿ ರಾಜಕಾರಣ ಮಾಡಿದ್ದಾರೆ. ವಿಜಯಪುರಕ್ಕೆ ಅವರ ಕೊಡುಗೆ ಶೂನ್ಯ, ಯಾವುದೇ ಅಭಿವೃದ್ದಿ ಮಾಡಿಲ್ಲ. ಎರಡು ಬಾರಿ ಅವಕಾಶ ನೀಡಿದರೂ ಪ್ರಯೋಜನ ಆಗಿಲ್ಲ. ಅಭಿವೃದ್ದಿ ಮಾಡದೆ ಜಿಲ್ಲೆಗೆ ಜಿಗಜಿಣಗಿ ಭಯೋತ್ಪಾದಕ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಅಭಿವೃದ್ದಿ ಮಾಡದವರು ಭಯೋತ್ಪಾದಕರು ಇದ್ದಂತೆ ಎಂದು ಜಿಗಜಿಣಗಿಯವರನ್ನು ಭಯೋತ್ಪಾದಕರಿಗೆ ಶಾಸಕ ದೇವಾನಂದ ಚೌಹಾಣ್ ಹೋಲಿಸಿದರು.
Next Story





