ಆರ್ಥಿಕ ವರ್ಷದಲ್ಲಿ ಎಚ್ಎಎಲ್ 19,400 ಕೋಟಿ ವಹಿವಾಟು
![ಆರ್ಥಿಕ ವರ್ಷದಲ್ಲಿ ಎಚ್ಎಎಲ್ 19,400 ಕೋಟಿ ವಹಿವಾಟು ಆರ್ಥಿಕ ವರ್ಷದಲ್ಲಿ ಎಚ್ಎಎಲ್ 19,400 ಕೋಟಿ ವಹಿವಾಟು](https://www.varthabharati.in/sites/default/files/images/articles/2019/04/2/185144.jpg)
ಬೆಂಗಳೂರು, ಎ.2: ಹಿಂದೂಸ್ತಾನ್ ಏರೊನಾಟಿಕ್ಸ್ ಲಿ. (ಎಚ್ಎಎಲ್) 2018-19ನೇ ಆರ್ಥಿಕ ವರ್ಷದಲ್ಲಿ ಒಟ್ಟಾರೆ 19,400 ಕೊಟಿ ರೂ. ವಹಿವಾಟು ನಡೆಸಿದೆ.
2018-19ರಲ್ಲಿ ಕಂಪನಿಯ ಆದಾಯ ಅಭಿವೃದ್ಧಿ ಶೇ.6 ಹೆಚ್ಚಳವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಶೇ.3.8 ಆದಾಯ ಹೆಚ್ಚಳವಾಗಿತ್ತು. 2017-18ರಲ್ಲಿ ಎಚ್ಎಎಲ್ 18,284 ಕೊಟಿ ರೂ. ವಹಿವಾಟು ನಡೆಸಿತ್ತು. ಸಂಸ್ಥೆ ಸ್ವದೇಶಿ ಉತ್ಪನ್ನ ಹಾಗೂ ತಂತ್ರಜ್ಞಾನಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ 2018-19ನೇ ಆರ್ಥಿಕ ವರ್ಷದಲ್ಲಿ ಆದ್ಯತೆ ನೀಡಿದ್ದು, ಏರೊಸ್ಪೆಸ್ ಮತ್ತು ರಕ್ಷಣಾ ಉತ್ಪನ್ನಗಳ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಸಲು ಒತ್ತು ನೀಡಲಾಗಿದೆ. ಈ ಮೂಲಕ ಗ್ರಾಹಕರಿಂದ ಬಂದಿರುವ ಬೇಡಿಕೆ ಹಾಗೂ ಭವಿಷ್ಯದಲ್ಲಿ ಬರಲಿರುವ ಬೇಡಿಕೆಗಳನ್ನು ಈಡೇರಿಸಲು ಎಚ್ಎಎಲ್ ಸಜ್ಜಾಗಿದೆ ಎಂದು ಸಿಎಂಡಿ ಆರ್.ಮಾಧವನ್ ತಿಳಿಸಿದ್ದಾರೆ.
41 ಹೊಸ ಏರ್ಕ್ರಾಫ್ಟ್: 2018-19ನೇ ಆರ್ಥಿಕ ವರ್ಷದಲ್ಲಿ ಎಚ್ಎಎಲ್ 41 ಏರ್ಕ್ರಾಫ್ಟ್ ಹಾಗೂ ಕಾಪ್ಟರ್, 98ಎಂಜಿನ್ಗಳನ್ನು ನಿರ್ಮಿಸಿದೆ. 213 ವಿಮಾನ, ಹೆಲಿಕಾಪ್ಟರ್ ಹಾಗೂ 540 ಇಂಜಿನ್ಗಳ ನಿರ್ವಹಣೆ ಮಾಡಿದೆ. ಭಾರತಿಯ ಸೇನೆಯಿಂದ ಕಾರ್ಯಾದೇಶದ ಅನ್ವಯ 40 ಅಡ್ವಾನ್ಸಡ್ ಲಘು ಹೆಲಿಕಾಪ್ಟರ್ (ಎಎಲ್ಎಚ್) ಪೈಕಿ 12 ಎಎಲ್ಎಚ್ಗಳನ್ನು ಈಗಾಗಲೇ ಉತ್ಪಾದಿಸಿದೆ. ಭಾರತದ ಸೇನೆಯ ಬೇಡಿಕೆಗೆ ಅನುಗುಣವಾಗಿ ಎಚ್ಎಎಲ್ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳು ನಿರಂತರವಾಗಿ ಸಾಗಿದೆ ಎಂದು ಎಚ್ಎಎಲ್ ತಿಳಿಸಿದೆ.