ಎಪ್ರಿಲ್ 28ರ ಮುನ್ನ ಅಧಿಕಾರದಿಂದ ಇಳಿಯುವೆ: ಅಲ್ಜೀರಿಯ ಅಧ್ಯಕ್ಷ
ಅಲ್ಜೀರ್ಸ್ (ಅಲ್ಜೀರಿಯ), ಎ. 2: ಅಲ್ಜೀರಿಯದ ಅಧ್ಯಕ್ಷ ಅಬ್ದುಲಝೀಝ್ ಎಪ್ರಿಲ್ 28ರಂದು ತನ್ನ ನಾಲ್ಕನೇ ಅವಧಿ ಮುಗಿಯುವ ಮುನ್ನ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂದು ಅವರ ಕಚೇರಿ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅವರು 1999ರಿಂದ ಅಲ್ಜೀರಿಯದ ಅಧ್ಯಕ್ಷ ಸ್ಥಾನದಲ್ಲಿದ್ದಾರೆ.
ತಾನು ಅಧಿಕಾರದಿಂದ ನಿರ್ಗಮಿಸಿದ ಬಳಿಕ ಸರಕಾರಿ ಸಂಸ್ಥೆಗಳು ತಮ್ಮ ಕಾರ್ಯನಿರ್ವಹಣೆಯನ್ನು ಮುಂದುವರಿಸುವಂತೆ ಖಚಿತಪಡಿಸಲು ಅಬ್ದುಲಝೀಝ್ ಹಲವಾರು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಕಿರು ಹೇಳಿಕೆ ತಿಳಿಸಿದೆ.
ಅಬ್ದುಲಝೀಝ್ ತನ್ನ ನಿಷ್ಠರೊಂದಿಗೆ ಅಧಿಕಾರದಿಂದ ಕೆಳಗಿಳಿಯಬೇಕೆಂದು ಆಗ್ರಹಿಸಿ ಅಲ್ಜೀರಿಯದಲ್ಲಿ ಪ್ರತಿ ವಾರ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ.
2013ರಲ್ಲಿ ಪಕ್ಷವಾತಕ್ಕೆ ಗುರಿಯಾದ ಬಳಿಕ, 82 ವರ್ಷದ ಅಧ್ಯಕ್ಷರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ತೀರಾ ಕಡಿಮೆ.
Next Story