ಇಸ್ರೇಲ್ ಪಡೆಗಳೊಂದಿಗೆ ಸಂಘರ್ಷ: ಫೆಲೆಸ್ತೀನ್ ನಿವಾಸಿ ಮೃತ್ಯು
ರಮಲ್ಲಾ (ಫೆಲೆಸ್ತೀನ್), ಎ. 2: ಜೆರುಸಲೇಮ್ ಸಮೀಪ ಸೋಮವಾರ ರಾತ್ರಿ ಇಸ್ರೇಲ್ ಪಡೆಗಳೊಂದಿಗೆ ನಡೆದ ಸಂಘರ್ಷದಲ್ಲಿ ಓರ್ವ ಫೆಲೆಸ್ತೀನ್ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
23 ವರ್ಷದ ಮುಹಮ್ಮದ್ ಅದ್ವಾನ್ ಮೃತಪಟ್ಟಿದ್ದಾರೆ ಹಾಗೂ ಮೂವರು ಗಾಯಗೊಂಡಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಜನರನ್ನು ಬಂಧಿಸುವುದಕ್ಕಾಗಿ ಮಂಗಳವಾರ ಮುಂಜಾನೆ ಇಸ್ರೇಲ್ ಸೈನಿಕರು ಕಾಲಂದಿಯ ಪ್ರದೇಶಕ್ಕೆ ಬಂದಾಗ ಯುವಕರು ಅವರತ್ತ ಕಲ್ಲೆಸೆದರು ಎಂದು ಸ್ಥಳೀಯರು ಹೇಳಿದ್ದಾರೆ. ಆಗ ನಡೆದ ಗುಂಡು ಹಾರಾಟದಲ್ಲಿ ಸಾವು-ನೋವು ಸಂಭವಿಸಿದೆ.
Next Story