ಅಂಬಲಪಾಡಿಯಲ್ಲಿ ಯಕ್ಷಗಾನ ನೃತ್ಯ ತರಬೇತಿ ಶಿಬಿರ
ಉಡುಪಿ, ಎ.3: ಅಂಬಲಪಾಡಿ ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯ ವತಿಯಿಂದ ಎ.11ರಿಂದ 20ರವರೆಗೆ ಅಂಬಲಪಾಡಿ ದೇವಸ್ಥಾನ ವಠಾರದಲ್ಲಿ ಆಸಕ್ತ ವಿದ್ಯಾರ್ಥಿಗಳಿಗಾಗಿ‘ಬೇಸಿಗೆ ಯಕ್ಷಗಾನ ಶಿಬಿರ’ವನ್ನು ಆಯೋಜಿಸಲಾಗಿದೆ.
ಪ್ರತಿದಿನ ಬೆಳಗ್ಗೆ 9:00ರಿಂದ 11:30ರವರೆಗೆ ತರಬೇತಿ ನಡೆಯಲಿದೆ. ಉಚಿತವಾದ ಈ ಶಿಬಿರದಲ್ಲಿ ಭಾಗವಹಿಸಲಿಚ್ಚಿಸುವ ಆಸಕ್ತರು ಶಿಬಿರದ ನಿರ್ದೇಶಕ ಕೆ.ಜೆ.ಕೃಷ್ಣ (9448108525), ಅಂಬಾ ಜ್ಯುವೆಲ್ಲರ್ಸ್, ಅಂಬಲಪಾಡಿ ಇವರಲ್ಲಿ ಹೆಸರು ನೋಂದಾಯಿಸಬೇಕಾಗಿ ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





