ಹೆಜ್ಜೇನು ದಾಳಿಗೆ ಯುವಕ ಬಲಿ

ಮಂಡ್ಯ, ಎ.3: ಜಮೀನಿನಲ್ಲಿ ನೀರು ಹಾಯಿಸುತ್ತಿದ್ದಾಗ ಹೆಜ್ಜೇನುಗಳು ದಾಳಿ ಮಾಡಿದ್ದರಿಂದ ಲೋಕೇಶ್ ಎಂಬ ರೈತ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೃಷ್ಣರಾಜಪೇಟೆ ತಾಲೂಕು ಮಂದಗೆರೆಯಲ್ಲಿ ನಡೆದಿದೆ.
ಲೋಕೇಶ್ ಅವರ ರಕ್ಷಣೆಗೆ ಮುಂದಾದ ನಾಗರಾಜು ಮತ್ತು ಕಾಳಶೆಟ್ಟಿಯವರಿಗೂ ಜೇನುಗಳು ದಾಳಿ ಮಾಡಿದ್ದು, ಅವರನ್ನು ಕೃಷ್ಣರಾಜಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.
Next Story





